ಕಾಲಿಗೆ ಸರಪಳಿಯಿಂದ ಬಂಧಿಸಿ ಪದ್ಮಾಸನ ಭಂಗಿಯಲ್ಲಿ ಈಜು:ಗಂಗಾಧರ್ ಜಿ.ಕಡೆಕಾರ್ ರಿಂದ ಹೊಸ ದಾಖಲೆ
ಉಡುಪಿ (ಉಡುಪಿ ಟೈಮ್ಸ್ ವರದಿ) : ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ 1400 ಮೀಟರ್ ಈಜಿ ಉಡುಪಿಯ ಗಂಗಾಧರ್ ಜಿ. ಕಡೆಕಾರ್ ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಶಾಸಕ ಕೆ. ರಘುಪತಿ ಭಟ್ ಅವರು ದಾಖಲೆ ಬರೆದ ಗಂಗಾಧರ್ ಜಿ. ಕಡೆಕಾರ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಕಾರ್ತಿಕ್ ಗ್ರೂಪ್ ಮಲ್ಪೆ ಮ್ಯಾನೇಜಿಂಗ್ ಡೈರೆಕ್ಟರ್ ಹರಿಯಪ್ಪ ಕೋಟ್ಯಾನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಕರಾವಳಿ ಕಾವಲುಪಡೆ ಪೊಲೀಸ್ ಅಧೀಕ್ಷಕರಾದ ಚೇತನ್ ಆರ್, ತೀರ್ಪುಗಾರರಾದ ಹರೀಶ ಆರ್ ಮತ್ತು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ (ರಿ.) ಕಡೆಕಾರ್ ಇದರ ಉಪಾಧ್ಯಕ್ಷರಾದ ಚಂದ್ರ ಎಂ ಕುಂದರ್, ಹರ್ಷ ಮೆಂಡನ್, ಜನಾರ್ದನ ಕೋಟ್ಯಾನ್ ಮತ್ತು ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.