ಉಡುಪಿಯಲ್ಲಿ ಮಲ್ಪೆ ಲಯನ್ಸ್ ಕ್ಲಬ್‍ನ ಪ್ರಾಂತೀಯ ಸಮ್ಮೇಳನ “ಶಶಿ ಚಂದನ”

ಉಡುಪಿ, ಜ.30 : ಮಲ್ಪೆ ಲಯನ್ಸ್ ಕ್ಲಬ್‍ನ ಲಯನ್ಸ್ ಪ್ರಾಂತೀಯ ಸಮ್ಮೇಳನ “ಶಶಿ ಚಂದನ” ಕಾರ್ಯಕ್ರಮ ಉಡುಪಿಯ ಅಂಬಾಗಿಲುವಿನ ಅಮೃತ್ ಗಾರ್ಡನ್‍ನಲ್ಲಿ ನಡೆಯಿತು.

ಮಲ್ಪೆ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ವಿಜಯಾ ಗೋಪಾಲ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ. ಬೀ. ವಿಜಯ ಬಲ್ಲಾಳ್ ಅವರು ಉದ್ಘಾಟಿಸಿದರು.

ಬಳೀಕ ಮಾತನಾಡಿದ ಅವರು, ಯಾವುದೇ ಸಂಘ ಸಂಸ್ಥೆಯಾಗಿರಲಿ ನಿಸ್ವಾರ್ಥ ಸೇವಾ ಗುಣ, ಮನೋಭಾವದಿಂದ ಕೆಲಸ ಮಾಡಿದಾಗ ಸಮಾಜದ ಏಳಿಗೆಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಹಾಗೂ ಉದಾತ್ತ ಸಾಮಾಜಿಕ ಸೇವೆಗಾಗಿ ಗುರುತಿಸಿಕೊಂಡಿರುವ ಲಯನ್ಸ್ ಸಂಸ್ಥೆ ಅಧಿಕಾರ, ಅಂತಸ್ತಿಗೆ ಸೀಮಿತಗೊಳ್ಳದೆ ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ವಿಶ್ವಾಸವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್‍ನ ಮಾಜಿ ನಿರ್ದೇಶಕ ಡಾ| ಕೆ. ಪಿ. ಪುತ್ತೂರಾಯ, ಹಿರಿಯ ವೈದ್ಯ ಆರ್ ಎನ್ ಭಟ್, ಲಯನ್ಸ್ ಪ್ರಥಮ ಜಿಲ್ಲಾ ಗವರ್ನರ್ ಡಾ| ನೇರಿ ಕರ್ನೇಲಿಯೋ, ದ್ವಿತೀಯ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಪೂರ್ವ ಗವರ್ನರ್ ಗಳಾದ ಶ್ರೀಧರ್ ಡಿ. ಶೇಣವ, ಡಾ| ತಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಭಾಗವಹಿಸಿದರು.

ಇನ್ನು ಪ್ರಾಂತೀಯ ಸಮ್ಮೇಳದ ಅಂಗವಾಗಿ ವಿವಿಧ ಸೇವಾ ಚಟುವಟಿಕೆ ನಡೆಸಲಾಗಿಯಿತು. ಮಲ್ಪೆ ನಾರಾಯಣಗುರು ಸಮುದಾಯ ಭವನಕ್ಕೆ ಕುಡಿಯುವ ನೀರಿನ ಘಟಕ, ಉಡುಪಿ ಲಕ್ಷ್ಯ ಕ್ಲಬ್ ವತಿಯಿಂದ ರಂಗನಪಲ್ಕೆಯ ಹೊಸಬೆಳಕು ಅನಾಥಾಶ್ರಮಕ್ಕೆ ಸ್ಯಾನಿಟರಿ ಪ್ಯಾಡ್ ದಹನ ಯಂತ್ರ, ಪುಸ್ತಕ ಸಾಮಾಗ್ರಿ ವಿತರಣೆ, ಮಲ್ಪೆ ಲಯನ್ಸ್ ವತಿಯಿಂದ ಬಡವಿದ್ಯಾರ್ಥಿಗೆ ಧನಸಹಾಯ, ಲಯನ್ ಮುಂದಾಳು ಗಣೇಶ್ ಸುವರ್ಣ ಅವರಿಂದ ವಿಶೇಷ ಚೇತನರಿಗೆ ಗಾಲಿ ಕುರ್ಚಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ವೆಂಕಟೇಶ್ ಕಾಮತ್, ಕಾರ್ಯಕ್ರಮ ಸಂಯೋಜಕ ರಾಮದಾಸ್ ಶೆಟ್ಟಿಗಾರ್, ಸಲಹೆಗಾರರಾದ ಬೆನಗಲ್ ನಾಗಪ್ಪ ಅಮೀನ್, ಸುದರ್ಶನ್ ಹೆಗ್ಡೆ ವಲಯಾಧ್ಯಕ್ಷರಾದ ಗಿರಿಜಾ ಶಿವರಾಮ ಶೆಟ್ಟಿ, ಜಾನ್ ಫೆರ್ನಾಂಡಿಸ್, ಭಾಸ್ಕರ್ ಎಸ್. ಶೆಟ್ಟಿ, ಮಲ್ಪೆ ಲಯನ್ಸ್ ಅಧ್ಯಕ್ಷ ಕರುಣಾಕರ ಬಂಗೇರ, ಕಾರ್ಯದರ್ಶಿ ಸುಧಾಕರ ಪೂಜಾರಿ, ಕೋಶಾಧಿಕಾರಿ ರವೀಂದ್ರ ಕರ್ಕೇರ, ಸಮ್ಮೇಳನ ಸಮಿತಿಯ ಅಧ್ಯಕ್ಷ ಗೋಪಾಲ ಸಿ. ಬಂಗೇರ, ವೀಣಾ ಬಾಯರಿ ಮತ್ತು ನಚಿಕೇತ್, ಪ್ರಾಂತೀಯ ಕಾರ್ಯದರ್ಶಿ ಗ್ಲಾಡೀಸ್ ವರ್ಗಿಸ್ ಮೊದಲಾವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!