ಬೈಂದೂರು: ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ

ಬೈಂದೂರು ಜ.30 (ಉಡುಪಿ ಟೈಮ್ಸ್ ವರದಿ) : ನಾಲ್ಕೈದು ದಿನಗಳಿಂದ ಯಡ್ತರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಾ ತಿರುಗುತ್ತಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಯಡ್ತರೆ ಗ್ರಾಮದ ಸೊಸೈಟಿಯ ಎದುರು ಪತ್ತೆಯಾಗಿದೆ.

ಮೃತ ವ್ಯಕ್ತಿ ಸುಮಾರು 60 ರಿಂದ 65 ವರ್ಷದವರಾಗಿದ್ದು, ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದೆ. ಇವರು ನಾಲ್ಕೈದು ದಿನಗಳಿಂದ ಯಡ್ತರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಾ ಸೊಸೈಟಿ ಜಗುಲಿಯಲ್ಲಿ ಮಲಗಿಕೊಂಡಿದ್ದವರು ವಯೋಸಹಜ ಖಾಯಿಲೆಯಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಆರೋಗ್ಯದಲ್ಲಿ ಏರುಪೇರಾಗಿ ಜ.28 ರ ರಾತ್ರಿಯಿಂದ ಜ.29ರ ಬೆಳಗ್ಗಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂಬುದಾಗಿ ಸುಧಾಕರ ಎಂಬವರು ನೀಡಿದ ಮಾಹಿತಿಯಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!