ದುಬೈನಲ್ಲಿ ಅಸ್ವಸ್ಥ ವ್ಯಕ್ತಿಗೆ ಸಹಾಯ- ಸೋನು ಸೂದ್ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ನವದೆಹಲಿ ಜ.19 : ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳ ಮೂಲಕವೂ ಜನರ ಮೆಚ್ಚುಗೆ ಪಡೆದಿರುವ ನಟ ಸೋನು ಸೂದ್ ಅವರು ಇದೀಗ ಮತ್ತೊಮ್ಮೆ ತಮ್ಮ ಕಾರ್ಯದ ಮೂಲಕ ಜನರ ಗಮನ ಸೆಳೆದಿದ್ದಾರೆ.

ಸೋನು ಸೂದ್ ಭಾರತಕ್ಕೆ ಹಿಂತಿರುಗಲು ದುಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಮೂರ್ಛೆ ಹೋಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸೋನು ಸೂದ್ ಅವರು ಕೂಡಲೇ ಆ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆ ವ್ಯಕ್ತಿಗೆ ಪ್ರಜ್ಞೆ ಬಂದಿದ್ದು, ತಮ್ಮ ಜೀವ ಉಳಿಸಿದ್ದಕ್ಕಾಗಿ ಸೋನು ಸೂದ್‍ಗೆ ಧನ್ಯವಾದ ಸಲ್ಲಿಸಿದ್ದಾರೆ.

ಸದ್ಯ ಸೋನು ಸೂದ್ ಅವರ ಸಾಮಾಜಿಕ ಕಳಕಳಿಗೆ ಸ್ಥಳದಲ್ಲಿದ್ದ ಅಧಿಕಾರಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!