ಅಸ್ಸಾಂ: 1,000 ಡೋಸ್ ಕೊರೊನಾ ಲಸಿಕೆ ಹೆಪ್ಪುಗಟ್ಟಿ ವ್ಯರ್ಥ

ಡಿಸ್ಪುರ್: ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್ಚೇರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್ ನಲ್ಲಿ ಸುಮಾರು 1,000 ಡೋಸ್ ಕೊರೊನಾ ಲಸಿಕೆ ಹೆಪ್ಪುಗಟ್ಟಿ ವ್ಯರ್ಥವಾದ ಘಟನೆ ವರದಿಯಾಗಿದೆ.  ವರದಿಗಳ ಪ್ರಕಾರ,  ಕೋವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕಾಗುತ್ತದೆ, ಆದರೆ ಸಿಲ್ಚಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಐಸ್ ಲೇನ್ಡ್ ರೆಫ್ರಿಜರೇಟರ್(ಐಎಲ್‍ಆರ್) ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿತ್ತು. ಹೀಗಾಗಿ ಲಸಿಕೆ ಕೆಟ್ಟು ಹೋಗಿದೆ ಎನ್ನಲಾಗಿದೆ.

ನಾವು ಸಾಮಾನ್ಯವಾಗಿ 2-8 ಡಿಗ್ರಿ ಸೆಲ್ಸಿಯಸ್ ನಡುವಿನ ಐಎಲ್‍ಆರ್ ತಾಪಮಾನವನ್ನು ನಿಯಂತ್ರಿಸುತ್ತೇವೆ. ತಾಪಮಾನ ಕಡಿಮೆಯಾದಾಗ ಐಎಲ್‍ಆರ್ ಯಂತ್ರ ಸಂದೇಶ ಕಳುಹಿಸುತ್ತದೆ. ಆದರೆ ನಮ್ಮ ವ್ಯಾಕ್ಸಿನೇಟರ್ ಯಾವುದೇ ಸಂದೇಶ ನೀಡಲಿಲ್ಲ. ಲಿಸಿಕೆ ಬಾಟ್ಲಿಗಳು ಭಾಗಶಃ ಹೆಪ್ಪುಗಟ್ಟಿರುವುದು ಕಂಡುಬಂದಿದ್ದು . ಬಹುಶಃ ಇದು ತಾಂತ್ರಿಕ ದೋಷವಾಗಿದ್ದು,  ಐಎಲ್‍ಆರ್ ನ ಕೆಲವು ತಾಂತ್ರಿಕ ದೋಷವಿರಬಹುದು. ಲಸಿಕೆಗಳನ್ನು ಇಡೀ ರಾತ್ರಿ ಸಂಗ್ರಹಿಸಲಾಗಿದೆ.

ತಾಪಮಾನ ಹೇಗೆ ಕಡಿಮೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಕ್ಯಾಚರ್ ಜಿಲ್ಲೆಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.ಸದ್ಯ ಘಟನೆಯನ್ನು ಗಂಭೀರ ಪರಿಗಣಿಸಿದ್ದು, ಈ ಬಗ್ಗೆ ಇಲಾಖೆ ತನಿಖೆಗೆ ಆದೇಶಿಸಿದೆ. ಇನ್ನು  ಅಷ್ಟೇ ಪ್ರಮಾಣದ ಸಲಿಕೆ ಬಾಟ್ಲಿಗಳನ್ನು ಮತ್ತೆ ಸಿಲ್ಚಾರ್ ವೈದ್ಯಕೀಯ ಹಾಗೂ ಆಸ್ಪತ್ರೆಗೆ ಕಳುಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!