ಪ್ರಧಾನಿಗಿಂತ ರೈತರೇ ಹೆಚ್ಚು ಪ್ರಜ್ಞಾವಂತರು: ರಾಹುಲ್ ಗಾಂಧಿ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮೂರ್ಖರನ್ನಾಗಿಸಬಹುದು ಎಂದು ಸರ್ಕಾರ ಭಾವಿಸುತ್ತಿದೆ, ಆದರೆ ಪ್ರಧಾನಿಗಿಂತ ರೈತರು ಹೆಚ್ಚು ಪ್ರಜ್ಞಾವಂತರು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ದಣಿವಾಗಿದ್ದು, ಅವರನ್ನು ಮೂರ್ಖರನ್ನಾಗಿಸಬಹುದು ಎಂದು ಸರ್ಕಾರ ಭಾವಿಸುತ್ತಿದೆ, ಆದರೆ ಪ್ರಧಾನಿಗಿಂತಲೂ ರೈತರು ಹೆಚ್ಚು ಪ್ರಜ್ಞಾವಂತರಾಗಿದ್ದಾರೆ” ಎಂದರು.
ಇನ್ನು ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ರಾಹುಲ್ ಗಾಂಧಿ, ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಪುನರುಚ್ಚರಿಸಿದ್ದಾರೆ. ಕೃಷಿಯನ್ನು ಅವಲಂಬಿಸಿರುವ ಶೇಕಡಾ 60ರಷ್ಟು ಪಂಜಾಬ್, ಹರಿಯಾಣದ ರೈತರು ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ನೂತನ ಕೃಷಿ ಕಾಯ್ದೆಯು ರೈತರ ಮೇಲೆ ಮಾತ್ರವಲ್ಲದೆ ಮಧ್ಯಮ ವರ್ಗದ ಮೇಲಿನ ಆಕ್ರಮಣವೂ ಆಗಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!