ಡಾರ್ಲಿಂಗ್ ಕೃಷ್ಣಾಗೆ ಜೋಡಿಯಾದ ಡಿಂಪಲ್ ಕ್ವೀನ್
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ಸದ್ಯ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿಂಪಲ್ ಕ್ವೀನ್, ಲವ್ ಮಾಕ್ ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.
ಇತ್ತ ಲವ್ ಮಾಕ್‌ಟೇಲ್ ಸಿನಿ ರಸಿಕರ ಮನಗೆದ್ದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಕೃಷ್ಣ ಕೂಡಾ ಫುಲ್ ಬ್ಯುಸಿಯಾಗಿದ್ದು, ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ಹಾಗೂ ಡಾರ್ಲಿಂಗ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಇಬ್ಬರು ಜನಪ್ರಿಯ ತಾರೆಯರನ್ನು ಒಟ್ಟಿಗೆ ತೆರೆ ಮೇಲೆ ತರುವ ಪ್ರಯತ್ನ ನವ ನಿದೇಶಕ ದೀಪಕ್ ಗಂಗಾಧರ್ ಅವರದ್ದು. ಇನ್ನೂ ಹೆಸರಿಡದ ಈ ಚಿತ್ರ ಪಕ್ಕಾ ಲವ್ ಸ್ಟೋರಿ ಕಥೆಯನ್ನು ಒಳಗೊಂಡಿದೆಯಂತೆ. ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡುತ್ತಿದ್ದು, ಈ ವರ್ಷದ ಏಪ್ರಿಲ್ ಅಥವಾ ಮಾರ್ಚ್ ನಿಂದ ಈ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ ಚಿತ್ರ ತಂಡ.