“ಜಬರ್‌ದಸ್ತ್ ಶಂಕರ” ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು :ಜಲನಿಧಿ ಫಿಲಂಸ್ ಲಾಂಛನದಲ್ಲಿ ತಯಾರಾದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಜಬರ್‌ದಸ್ತ್ ಶಂಕರ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ನಡೆಯಿತು. ಸಮಾರಂಭವನ್ನು ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.


ತುಳು ನಾಟಕ ರಂಗ ಮತ್ತು ತುಳು ಸಿನಿಮಾರಂಗ ಇಂದು ಉತ್ತುಂಗ ಮಟ್ಟದಲ್ಲಿದೆ. ಈ ಹಿಂದೆ ಕೆ.ಎನ್ ಚೇಲರ್ ಇಲ್ಲಿ ಅಧ್ವಿತೀಯ ಸಾಧನೆ ಮಾಡಿದ್ದಾರೆ. ಬಳಿಕ ದೇವದಾಸ್ ಕಾಪಿಕಾಡ್ ಅವರು ಮಾಡಿದ ಸಾಧನೆ ದೊಡ್ಡ ಮಟ್ಟದಲ್ಲಿದೆ. ಇವತ್ತು ನಾಟಕ, ಸಿನಿಮಾದ ಮೂಲಕ ತುಳು ಭಾಷೆಯನ್ನು ವಿಶ್ವದಲ್ಲೆಡೆ ಪಸರಿಸಿದ ಕೀರ್ತಿ ಕಾಪಿಕಾಡ್‌ರಿಗೆ ಸಲ್ಲುತ್ತದೆ ಎಂದವರು ತಿಳಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲಚಿತ್ರ ನಿರ್ಮಾಪಕ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ ಅವರು ಕಾಪಿಕಾಡ್ ಅವರ ನಾಟಕಗಳು ಜನಪ್ರಿಯತೆ ಪಡೆದಂತೆ ತುಳು ಸಿನಿಮಾಗಳೂ ಕೂಡಾ ಯಶಸ್ಸನ್ನು ಪಡೆದಿದೆ. ಜಬರ್‌ದಸ್ತ್ ಶಂಕರ ಕೂಡಾ ಯಶಸ್ಸನ್ನು ಗಳಿಸಿದೆ ಎಂದರು. ಬಿಗ್ ಸಿನಿಮಾಸ್‌ನ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ ಸಿನಿಮಾಕ್ಕೆ ಶುಭ ಹಾರೈಸಿದರು. ಜಬರ್‌ದಸ್ತ್ ಶಂಕರ ಸಿನಿಮಾದ ನಿರ್ದೇಶಕ ದೇವದಾಸ್ ಕಾಪಿಕಾಡ್ ಪ್ರಸ್ತಾವಿಕವಾಗಿ ಮಾತನಾಡಿದರು.


ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಸರೋಜಿನಿ ಶೆಟ್ಟಿ, ನಿರ್ಮಾಪಕರಾದ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್, ರಾಜೇಶ್ ಕುಡ್ಲ, ಶರ್ಮಿಳಾ ಕಾಪಿಕಾಡ್, ಸುರೇಂದ್ರ, ಸಾಯಿಕೃಷ್ಣ, ತಿಮ್ಮಪ್ಪ ಕುಲಾಲ್, ನೀತಾ ಅಶೋಕ್, ಅರ್ಜುನ್ ಕಾಪಿಕಾಡ್, ರಾಶಿ ಬಿ. ಗಿರೀಶ್ ಎಂ. ಶೆಟ್ಟಿ ಕಟೀಲು, ಸುನೀಲ್ ನೆಲ್ಲಿಗುಡ್ಡೆ, ಶರಣ್ ಕೈಕಂಬ, ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ್ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಪಿವಿಆರ್, ಸಿನಿ ಪೊಲೀಸ್, ಉಡುಪಿಯಲ್ಲಿ ಆಶೀ ರ್ವಾದ್, ಮಣಿಪಾಲದಲ್ಲಿ ಐನಾಕ್ಸ್, ಬಿಗ್ ಸಿನಿಮಾಸ್. ಸುರತ್ಕಲ್‌ನಲ್ಲಿ ನಟರಾಜ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಕಾಸರ ಗೋಡಿನಲ್ಲಿ ಕೃಷ್ಣ, ಮೂಡಬಿದ್ರೆಯಲ್ಲಿ ಅಮರಶ್ರೀ, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡಿದೆ.


ತಾರಾಗಣದಲ್ಲಿ ಅರ್ಜುನ್ ಕಾಪಿಕಾಡ್, ನೀತಾ ಅಶೋಕ್, ರಾಶಿ ಬಿ. ಸಾಯಿ ಕೃಷ್ಣ, ಸತೀಶ್ ಬಂದಲೆ, ಗೋಪಿನಾಥ ಭಟ್, ಗಿರೀಶ್ ಎಂ ಶೆಟ್ಟಿ ಕಟೀಲು, ಲಕ್ಷ್ಮಣ್ ಕುಮಾರ್ ಮಲ್ಲೂರು, ಪ್ರತೀಕ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಶರಣ್ ಕೈಕಂಬ, ತಿಮ್ಮಪ್ಪ ಕುಲಾಲ್ ಹಾಗೂ ಚಾಪರ್‍ಕ ತಂಡದ ಕಲಾವಿದರು ಸಿನಿಮಾದಲ್ಲಿದ್ದಾರೆ.
ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡನ್ನು ದೇವದಾಸ್ ಕಾಪಿಕಾಡ್ ರಚಿಸಿ ಅವರೇ ಹಾಡಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ದೇವದಾಸ್ ಕಾಪಿಕಾಡ್ ಹಾಡಿದ ಹಾಡು ಈಗಾಗಲೇ ಜನಪ್ರಿಯಗೊಂಡಿದೆ. ಸಿನಿಮಾದಲ್ಲಿ ಮೂರು ಹಾಡುಗಳು ಇವೆ. ಜಬರ್‌ದಸ್ತ್ ಶಂಕರ ಸಿನಿಮಾಕ್ಕೆ ಕತೆ, ಚಿತ್ರಕತೆ, ಸಾಹಿತ್ಯದೊಂದಿಗೆ ದೇವ ದಾಸ್ ಕಾಪಿಕಾಡ್ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


ದೇವದಾಸ್ ಕಾಪಿಕಾಡ್ ಅವರು ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ತುಳು ಚಿತ್ರರಂಗದ ಮಟ್ಟಿಗೆ ವಿನೂತನ ಶೈಲಿಯಲ್ಲಿ ಮೂಡಿ ಬಂದಿದೆ.
ಸಿನಿಮಾದಲ್ಲಿ ಮಾಸ್ ಮಾದ ತಂಡ ವಿನ್ಯಾಸಗೊಳಿಸಿದ ಸ್ಟಂಟ್ ದೃಶ್ಯಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ತುಳು ಚಿತ್ರರಂಗಕ್ಕೆ ಹೊಸದಾದ ಫೈಟ್ ದೃಶ್ಯಗಳನ್ನು `ಜಬರದಸ್ತ್ ಶಂಕರ’ನಿಗಾಗಿ ಅಳವಡಿಸಲಾಗಿದೆ.
ಕಲೆ ಕೇಶವ ಸುವರ್ಣ, ಕಾಸ್ಟ್ಯೂಮ್ ಶರತ್ ಪೂಜಾರಿ, ಮೇಕ್ ಅಪ್ ಮೋಹನ್, ಕೇಶಾಲಂ ಕಾರ ಮಮತಾ ಶೆಟ್ಟಿ ಮತ್ತು ಪಿಂಕಿ ಅಮೀನ್ ಮತ್ತಿತರರು. ಅರ್ಜುನ್ ಕಾಪಿಕಾಡ್ ಪ್ರಧಾನ ಸಹನಿರ್ದೇಶಕ ರಾಗಿ ಕೂಡ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ: ಸಿದ್ದು ಜಿ.ಎಸ್. ಉದಯ ಬಳ್ಳಾಲ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಸ ಮಾಸ್ ಮಾದ, ನೃತ್ಯ: ಸ್ಟಾರ್‌ಗಿರಿ, ವಿನಾಯಕ ಆಚಾರ್ಯ, ಮುಖ್ಯ ಸಹಾಯಕ ನಿರ್ದೇಶಕರು: ಅರ್ಜುನ್ ಕಾಪಿ ಕಾಡ್, ಸಹಾಯಕ ನಿರ್ದೇಶಕ ಪ್ರಶಾಂತ್ ಕಲ್ಲಡ್ಕ.

Leave a Reply

Your email address will not be published. Required fields are marked *

error: Content is protected !!