ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಗುರುವಾಯನಕೆರೆ ಕೆರೆಯಲ್ಲಿ ಇಂದು (ಡಿ.5)ನಡೆದಿದೆ. ಮೃತ ವ್ಯಕ್ತಿಯ ಬಟ್ಟೆಯ ಜೇಬಿನಲ್ಲಿ ಸಿಕ್ಕಿದ್ದ ಕಾಗದದ ಮೂಲಕ ಮೃತರು ಉಡುಪಿ ಮೂಲದವರೆಂದು ಹೇಳಲಾಗುತ್ತಿದೆ. ಗುರುವಾಯನಕೆರೆ ಸಮೀಪದ ಸ್ಥಳೀಯ ನಿವಾಸಿಗಳಿಗೆ ಕೆರೆಯಲ್ಲಿ ಶವವೊಂದು ಕೆಳಮುಖವಾಗಿ ತೇಲುತ್ತಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಸ್ಥಳೀಯರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಅಗ್ನಿ ಶಾಮಕ ದಳದವರ ಕಾರ್ಯಾಚರಣೆಯಿಂದ ಶವವನ್ನು ಮೇಲಕ್ಕೆತ್ತಲಾಯಿತು.
ಇನ್ನು ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾದ ದುರ್ಘನೆಯಿಂದ ಸಾವು ಸಂಭವಿಸಿರಬಹುದೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಿದೆ