ಕಾಪು: ಡಿ.10 ರಂದು ಲೆಟ್ಸ್ ನಾಚೋ ನೃತ್ಯ ಸ್ಪರ್ಧೆ 2022

ಕಾಪು ನ.15 (ಉಡುಪಿ ಟೈಮ್ಸ್ ವರದಿ) : ಝೀ ಝೋ ಎಜುಕೇಶನ್ ವತಿಯಿಂದ ಲೆಟ್ಸ್ ನಾಚೋ ಎಂಬ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ 2022 ನ್ನು ಡಿ.10 ರಂದು ಸಂಜೆ 6 ಗಂಟೆಗೆ ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಆಯೋಜಕರು ಮಾಹಿತಿ ನೀಡಿದ್ದು, ಈ ಸ್ಪರ್ಧೆಯು ಸೋಲೋ ಮತ್ತು ಗ್ರೂಪ್ ವಿಭಾಗಗಳಲ್ಲಿ ನಡೆಯಲಿದೆ. ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 8,000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4000 ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು. ಹಾಗೂ ಸೋಲೋ ವಿಭಾಗದಲ್ಲಿ ಪ್ರಥಮ ಬಹುಮಾನ 3,000 ನಗದು ಮತ್ತು ಟ್ರೋಫಿ, ದ್ವಿತೀಯ 1,500 ನಗದು ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು ಇರಲಿವೆ. ನೋಂದಣಿ ಮಾಡಲು ಡಿಸೆಂಬರ್ 6 ಕಡೆಯ ದಿನವಾಗಿದ್ದು ಸೊಲೋ ವಿಭಾಗಕ್ಕೆ 200 ರೂ. ಮತ್ತು ಗುಂಪು ವಿಭಾಗಕ್ಕೆ 500 ರೂ. ನೋಂದಣಿ ಶುಲ್ಕ ನಿಗದಿಸಲಾಗಿದೆ. ಕ್ಯಾಶ್ ಅಥವಾ 8746023845 ನಂಬರಿಗೆ ಫೋನ್ ಪೇ ಮಾಡುವ ಮೂಲಕ ನೊಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

ಹಾಗೂ ಈ ಸ್ಪರ್ಧೆಯಲ್ಲಿ ಸೋಲೋ ನೃತ್ಯಕ್ಕೆ 2+1 ನಿಮಿಷ ಹಾಗೂ ಗ್ರೂಪ್ ನೃತ್ಯಕ್ಕೆ 4+1 ನಿಮಿಷ ನೀಡಲಾಗಿದ್ದು, ಹೆಚ್ಚು ಕಾಲಾವಕಾಶಗಳನ್ನು ತೆಗೆದುಕೊಂಡಲ್ಲಿ ಅಂಕಗಳು ಕಡಿತಗೊಳ್ಳಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದ್ದು ಯಾವುದೇ ವಯಸ್ಸಿನ ಮಿತಿಯನ್ನು ವಿಧಿಸಿಲ್ಲ. ಈ ಸ್ಪರ್ಧೆಯ ಅಂಕವನ್ನು ಸ್ಪರ್ಧಿಗಳ ವಸ್ತ್ರ, ನೃತ್ಯ ಪ್ರಕಾರ, ಮತ್ತು ಅದನ್ನ ಪ್ರಸ್ತುತಪಡಿಸುವುದರ ಆಧಾರದ ಮೇಲೆ ತೀರ್ಪು ನೀಡಿ ನಿರ್ಧರಿಸಲಾಗುತ್ತದೆ. ನೃತ್ಯದ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಯಾಂಡಲ್, ಪಟಾಕಿ, ಸಿಗರೇಟ್ ಮೊದಲಾದ ಬೆಂಕಿ ಸೃಷ್ಟಿಸುವ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಗ್ರೂಪ್ ಡ್ಯಾನ್ಸ್ ನಲ್ಲಿ ಕನಿಷ್ಠ ಮೂರು ಜನ ಹಾಗೂ ಗರಿಷ್ಠ 20 ಮಂದಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧೆಯಲ್ಲಿ ನೃತ್ಯಕ್ಕಾಗಿ ಬಳಸುವ ಹಾಡುಗಳು ಆಯ್ಕೆಗೆ ಸ್ಪರ್ಧಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ದಾಳುಗಳು ತಮ್ಮ ನೃತ್ಯದ ಕಾಯ್ದಿರಿಸುವಿಕೆಯನ್ನ ಡಿ.10ರ ಸಂಜೆ 5:30 ಒಳಗೆ ಕಾತರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7676921592, 8746023845 ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.

Leave a Reply

Your email address will not be published.

error: Content is protected !!