ಉಡುಪಿ: ಮಕ್ಕಳ ಫೋಟೋ ಸ್ಪರ್ಧೆ 2022 ರ ವಿಜೇತರ ಪಟ್ಟಿ ಪ್ರಕಟ

ಉದ್ಯಾವರ ನ.14 (ಉಡುಪಿ ಟೈಮ್ಸ್ ವರದಿ): ಮಕ್ಕಳ ದಿನಾಚರಣೆ ಪ್ರಯುಕ್ತ ಮಮ್ಮಿ ಡಿಜಿಟಲ್ ಸ್ಟುಡಿಯೋ ಉದ್ಯಾವರ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಸಹಕಾರದೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಫೋಟೋ ಸ್ಪರ್ಧೆ 2022 ಇದರ ವಿಜೇತ ಮಕ್ಕಳ ಪಟ್ಟಿ ಪ್ರಕಟಗೊಂಡಿದೆ.

ಮಕ್ಕಳ ಫೋಟೋ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆದಿದ್ದು ಎರಡು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಉಜಿರೆಯ ಶೌರ್ಯ ರೈ ಪ್ರಥಮ ಬಹುಮಾನ, ಉಡುಪಿಯ ಸಾಕ್ಷ್ ಡಿ ಸಾಲ್ಯಾನ್ ದ್ವಿತೀಯ ಬಹುಮಾನ ಹಾಗೂ ಉಜಿರೆಯ ಅಥರ್ವ್ ಎಸ್ ನಾಯಕ್ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಪೆರ್ಡೂರಿನ ಶಿವನ್ಯ, ಆರ್ಯನ್ ದೇವಾಡಿಗ ಹಾಗೂ ಉಡುಪಿಯ ಪ್ರಾಂಶ್ ಪಿ ಆಚಾರ್ಯ, ಝೈಯಾನ್ ಜಯಂ ಐಸಾಕ್ ಡ್ಯಾನಿಯಲ್ ಸಮಾಧಾನ ಬಹುಮಾನವನ್ನ ಪಡೆದುಕೊಂಡಿದ್ದಾರೆ.

ಇನ್ನು ಈ ಸ್ಪರ್ಧೆಯ ಎರಡರಿಂದ ಐದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕಾರ್ಕಳದ ಇತಾಶಾ ಕೋಟ್ಯಾನ್ ಪ್ರಥಮ ಬಹುಮಾನ, ಬೆಳ್ತಂಗಡಿಯ ಧ್ರುವಿ ಜೈನ ದ್ವಿತೀಯ ಬಹುಮಾನ ಹಾಗೂ ಸಂತೆಕಟ್ಟೆಯ ಕೃತಿ ಪಿ. ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಕಾರ್ಕಳದ ಪಲ್ವಿತ್ ಕೌಶಿಕ್, ಉಡುಪಿಯ ಅವಿನ್ ಕೆ, ರಿತ್ವಿಕ್ ಕೆ. ರಾವ್, ಸಂತಕಟ್ಟೆಯ ರಿಯಾಲ್ ನೀಲ್ ಪಿಂಟೋ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಫೋಟೋ ಸ್ಪರ್ಧೆಯ ತೀರ್ಪುಗಾರರಾಗಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ನ ಸದಸ್ಯರಾದ ಫೋಟೋಗ್ರಾಫರ್ ಪ್ರಸಾದ್ ಜತ್ತನ್ನ ಮತ್ತು ಸುರಭಿ ರತನ್ ರವರು ಸಹಕರಿಸಿದರು.

Leave a Reply

Your email address will not be published.

error: Content is protected !!