ಬಿಗ್‌ ಬಾಸ್‌ ಸ್ಪರ್ಧಿ ರೂಪೇಶ್‌ ಶೆಟ್ಟಿಗೆ ಬೆದರಿಕೆ – ದೂರು ದಾಖಲು

ಮಂಗಳೂರು ನ.8 : ತುಳು ಚಿತ್ರ ನಟ, ಬಿಗ್ ಬಾಸ್ ಕನ್ನಡ ಓಟಿಟಿ ವಿಜೇತ ರೂಪೇಶ್‌ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ರೂಪೇಶ್ ಶೆಟ್ಟಿ ಅವರ ಕುಟುಂಬ ಸದಸ್ಯರು ಮಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದು, ಸೆನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ರೂಪೇಶ್‌ ಶೆಟ್ಟಿ ಅವರು ಪ್ರಸ್ತುತ ಬಿಗ್ ಬಾಸ್ ಕನ್ನಡ ಟಿವಿ ಸರಣಿಯ ಸ್ಪರ್ಧಿಯಾಗಿದ್ದು,  ಬಿಗ್‌ ಬಾಸ್‌ ನಲ್ಲಿ ಅವರು  ನೀಡಿರುವ ಹೇಳಿಕೆಗಳನ್ನಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾರೆ. ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರೂಪೇಶ್‌ ಅವರ ಕುಟುಂಬ ಸದಸ್ಯರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

Leave a Reply

Your email address will not be published.

error: Content is protected !!