ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ : ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟಣೆ

ಶಿವಮೊಗ್ಗ ನ.7 : ನಾವ್ಯಾರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಹೇಳಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ತೊರೆದವರನ್ನು ಪುನಃ ಪಕ್ಷಕ್ಕೆ ಸೇರಿಸುವ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಆಹ್ವಾನ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಸೂರ್ಯ, ಚಂದ್ರ ಇರುವರೆಗೂ ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೆಲ್ಲಾ ಬರಬೇಕು ಎಂದು ಹೇಳುವ ಅಧಿಕಾರ ಅವರಿಗುಂಟು. ಯಾರು ಹೋಗಬೇಕು ಎಂದು ಹೇಳುವ ಅಧಿಕಾರ ನಮಗುಂಟು. ನಾವೇನು ಅರ್ಜಿ ಹಾಕಿಲ್ಲ, ಅರ್ಜಿ ಹಾಕುವ ಅವಶ್ಯಕತೆ ನಮಗಿಲ್ಲ. ನಾವ್ಯಾರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published.

error: Content is protected !!