ಉಡುಪಿ: ಅಮೇರಿಕಾ ಸಂಜಾತ ದೃಢವೃತ ಗೋರಿಕ್ ಅವರ “ದಿವ್ಯಕಲಾ” ಅನಾವರಣ

ಉಡುಪಿ, ನ.4 : ಉಡುಪಿ ಕುಂಜಿಬೆಟ್ಟಿನ ಅದಿತಿ ಗ್ಯಾಲರಿಯಲ್ಲಿ ಅಮೇರಿಕಾ ಸಂಜಾತ ದೃಢವೃತ ಗೋರಿಕ್ ಅವರ “ದಿವ್ಯಕಲಾ” ಕಲಾ ಪ್ರದರ್ಶನದ ಅನಾವರಣ ಕಾರ್ಯಕ್ರಮ ನಡೆಯಿತು.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಆಶೀರ್ವಚನ ನೀಡಿದ ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮೀಜಿ ಅವರು, ಆಹಾರ ಎನ್ನುವ ಶಬ್ದ ಕೇವಲ ಜಠರಾಗ್ನಿಯನ್ನು ತಣಿಸಿದರೆ ಸಾಲದು. ನಾವು ನೋಡುವ ಪ್ರತಿ ದೃಶ್ಯವೂ ಆಹಾರವಾಗಬೇಕು. ಇದರಿಂದ ಮಾನವನ ಆಧ್ಯಾತ್ಮಿಕ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಅದಿತಿ ಗ್ಯಾಲರಿ ಆಡಳಿತ ವಿಶ್ವಸ್ಥರಾದ ಡಾ . ಕಿರಣ್ ಆಚಾರ್ಯ ಅವರು ಮಾತನಾಡಿ, ನವೆಂಬರ್ 4, 5 ಮತ್ತು 6 ರಂದು ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ಕಲಾ ಪ್ರದರ್ಶನದ ವೀಕ್ಷಣೆಗೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ, ಆಸ್ಟ್ರೊ ಮೋಹನ್ ಉಪಸ್ಥಿತರಿದ್ದರು.

Leave a Reply

Your email address will not be published.

error: Content is protected !!