ಸಹಕಾರಿ ಸಪ್ತಾಹದ ಪೂರ್ವಭಾವಿ ಸಭೆ : ಕಾರ್ಯಕ್ರಮ ಯಶಸ್ವಿಗೆ ಕರೆ

ಉಡುಪಿ ನ.4 (ಉಡುಪಿ ಟೈಮ್ಸ್ ವರದಿ) : ಉಚ್ಚಿಲದಲ್ಲಿ ನ.14 ರಿಂದ ಏಳು ದಿನಗಳ ಕಾಲ ನಡೆಯಲಿರುವ ಸಹಕಾರಿ ಸಪ್ತಾಹದ ಉದ್ಘಾಟನೆ ಮತ್ತು ಸಹಕಾರಿ ಭೀಷ್ಮ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರ ಅಭಿನಂದನೆ ಸಮಾರಂಭದ ಪೂರ್ವಭಾವಿ ಸಭೆ ಇಂದು ಉಡುಪಿಯ ಡಯಾನ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಕರಾವಳಿ ಜಿಲ್ಲೆಯ ಸಮಸ್ತ ಸಹಕಾರಿಗಳ ಶಕ್ತಿಪ್ರದರ್ಶನ ಮಾಡುವ ನಿಟ್ಟಿನಲ್ಲಿ ಆಯೋಜಿಸಲಾದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಮಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಸಹಕಾರ ಸಪ್ತಾಹದಂದು (ನ.14) ಸಂಸ್ಥೆಗಳಿಗೆ ರಜೆ ಘೋಷಿಸಿ, ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳು ಭಾಗವಹಿಸಬೇಕು. ಬೈಕ್ ಜಾಥಾದಲ್ಲಿ ಎಲ್ಲಾ ಸಹಕಾರಿಗಳು ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಎ.ಸುವರ್ಣ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ, ಕೆ.ಎಂ.ಎಫ್ ನಿರ್ದೇಶಕ ದಿವಾಕರ ಶೆಟ್ಟಿ ಕಾಪು, ಬೆಂಗಳೂರು ಸಂಯುಕ್ತ ಸೌಹಾರ್ದ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್. ಕೆ, ಸಹಕಾರಿ ಸಂಘಗಳ ಸಹಾಯಕ ಉಪನಿಬಂಧಕಿ ಲಾವಣ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಲೆಕ್ಕ ಪರಿಶೋಧನಾ ಇಲಾಖಾಧಿಕಾರಿ ಗಣೇಶ ಮಯ್ಯ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರುಗಳಾದ ಹರೀಶ್ ಕಿಣಿ ಅಲೆವೂರು, ಶಂಕರ ಪೂಜಾರಿ ಕಟಪಾಡಿ, ಸುನೀಲ್ ಕುಮಾರ್, ಕೊರಗ ಪೂಜಾರಿ, ಸಹಕಾರ ಸಂಘಗಳ ಉಪನಿಬಂಧಕರರಾದ ಲಕ್ಷ್ಮೀನಾರಾಯಣ, ಶ್ರೀಧರ್ ಪಿ.ಎಸ್ ಉಪಸ್ಥಿತರಿದ್ದರು.

Leave a Reply

Your email address will not be published.

error: Content is protected !!