ಮುಂಬೈ : ಎಸಿ ಕಂಪ್ರೆಸರ್ ಸ್ಫೋಟ : ಮೂವರು ಕಾರ್ಮಿಕರು ಮೃತ್ಯು

ಮುಂಬೈ ಆ.20 : ಏರ್ ಕಂಡೀಷನರ್ ಕಂಪ್ರೆಸರ್ ಸ್ಫೋಟಗೊಂಡು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ನಲ್ಲಿರುವ ರಾಷ್ಟ್ರೀಯ ರಾಸಾಯನಿಕ ಹಾಗೂ ರಸಗೊಬ್ಬರ (ಆರ್.ಸಿ.ಎಫ್) ಘಟಕದಲ್ಲಿ ನಡೆದಿದೆ.

ಅಲಿಬಾಗ್‍ನ ಥಾಲ್ ನಲ್ಲಿರುವ ಆರ್.ಸಿ.ಎಫ್ ಘಟಕದಲ್ಲಿ ಕಾರ್ಮಿಕರ ಗುಂಪು ಏರ್ ಕಂಡೀಷನರ್ ನ್ನು ದುರಸ್ತಿ ಮಾಡುತ್ತಿದ್ದಾಗ ಇದಕ್ಕಿದ್ದಂತೆ ಎಸಿ ಕಂಪ್ರೆಸರ್ ಸ್ಫೋಟಗೊಂಡಿದೆ. ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಅಲಿಬಾಗ್ ಠಾಣಾ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!