ಹೃದಯಕ್ಕೆ ಹತ್ತಿರವಾಗೋಣ
ವಿಶೇಷ ಲೇಖನ: ಡಾ ವಿಜಯ್ ನೆಗಳೂರ್
ಉಡುಪಿ ಸೆ.29 (ಉಡುಪಿ ಟೈಮ್ಸ್ ವರದಿ) : ಆರೋಗ್ಯಯುತ ಜೀವನಕ್ಕೆ ದೇಹದ ಪ್ರತಿಯೊಂದು ಅಂಗವೂ ಆರೋಗ್ಯವಾಗಿರುವುದು ಬಹಳ ಮುಖ್ಯ, ಅದರಲ್ಲೂ ದೇಹದ ಬಹುಮುಖ್ಯ ಅಂಗವಾದ ಹೃದಯದ ಆರೈಕೆಯೂ ಅಷ್ಟೇ ಪ್ರಮುಖವಾದದ್ದು.
ವಿಶ್ವ ಹೃದಯ ದಿನವನ್ನು ಸೆಪ್ಟಂಬರ್ 29 ರಂದು ಆಚರಿಸುತ್ತಿದ್ದೇವೆ. ವಿಶ್ವ ಹೃದಯ ದಿನದಂದು ಹೃದ್ರೋಗಗಳು ಮತ್ತು ಅವುಗಳಿಗೆ ಕಾರಣವಾಗುವ ಅಪಾಯಾಂಶಗಳ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಅರಿವು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ವ್ಯಕ್ತಿಗಳು, ಕುಟುಂಬಗಳು, ಸಂಘಟನೆಗಳು, ಸಮುದಾಯಗಳು ಮತ್ತು ಸರಕಾರಗಳ ಸಕ್ರಿಯ ಭಾಗವಹಿಸುವಿಕೆಯಿಂದ ವಿಶ್ವ ಹೃದಯ ದಿನವು ಒಂದು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ.
ಜಾಗತಿಕ ಮಟ್ಟದಲ್ಲಿ ಹೃದಯ ಕಾಯಿಲೆಗಳ ಜಾಗೃತಿ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ಡಿಜಿಟಲ್ ಆರೋಗ್ಯದ ಶಕ್ತಿಯನ್ನು ಬಳಸಿಕೊಳ್ಳುವುದು ವಲ್ರ್ಡ್ ಹಾರ್ಟ್ ಡೇ 2021 ಕ್ಕೆ ನಮ್ಮ ಗುರಿಯಾಗಿದೆ
ಹೃದಯ ಸಂಬಂದಿ ಕಾಯಿಲೆಗಳು
ಹೃದಯ ಅಥವಾ ಮಿದುಳಿನಂತಹ ದೇಹದ ವಿವಿಧ ಅಂಗಗಳ ರಕ್ತನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಕೊರೊನರಿ ಹಾರ್ಟ್ ಡಿಸೀಸ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬ್ರೋ ವಾಸ್ಕಾಲಾರ್ ಡಿಸೀಸ್ ಎಂದು ಕರೆಯಲ್ಪಡುವ ಲಕ್ವಾ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದುವು.
ತಡೆಯುವ ವಿಧಾನ
ಆಹಾರಾಭ್ಯಾಸ ನಿಯಂತ್ರಣ, ಸಮತೋಲನ ಆಹಾರ, ವ್ಯಾಯಾಮ, ರಕ್ತದೊತ್ತಡದ ನಿಯಂತ್ರಣ ಮತ್ತು ತಂಬಾಕು ಉತ್ಪನ್ನಗಳ ಬಳಕೆ, ಸೇವನೆಯನ್ನು ತ್ಯಜಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ. ವಿಶ್ವ ಹೃದಯ ದಿನದ ಈ ವರ್ಷದ ಘೋಷ ವಾಕ್ಯವು “”ಆರೋಗ್ಯದ ಹೃದಯದಲ್ಲಿ” ಎಂಬುದಕ್ಕೆ ಸಂಬಂಧಿಸಿದೆ.
ಹೃದಯಾಘಾತದ ಎಚ್ಚರಿಕೆ ಸಂಕೇತಗಳು
ದವಡೆಯಿಂದ ಕೆಳಭಾಗ ಮತ್ತು ಹೊಕ್ಕುಳಿಗಿಂತ ಮೇಲು ಭಾಗದ ಯಾವುದೇ ಸ್ಥಳದಲ್ಲಿ ಅಸ್ವಸ್ಥತೆಯು ಹೃದಯ ರೋಗದ ಕಾರಣವಾಗಿ ಉಂಟಾಗಿರಬಹುದು ಮತ್ತು ಅದರ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಎಷ್ಟು ಸಾಧ್ಯವೋ ಅಷ್ಟು ಬೇಗ ಪರಿಣಿತ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬೇಕು. ಹೃದಯಾಘಾತದ ಕೌಟುಂಬಿಕ ಚರಿತ್ರೆ ಇರುವವರು ಹೃದಯರೋಗಗಳಿಗೆ ತುತ್ತಾಗುವ ಅಪಾಯ ಇರುವುದರಿಂದ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು.
ನಿಮ್ಮ ಹೃದಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು
-ವ್ಯಾಯಾಮ : ದಿನಕ್ಕೆ ಸುಮಾರು 30 ನಿಮಿಷಗಳ ನಡಿಗೆ
-ಮದ್ಯಪಾನ, ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳ ಬಳಕೆ ನಿಲ್ಲಿಸಿ
-ಆರೋಗ್ಯಕರ ಆಹಾರಾಭ್ಯಾಸ : ಸಾಕಷ್ಟು ತಾಜಾ ಹಣ್ಣುಗಳು, ತರಕಾರಿಗಳು, ಮೀನು, ಬಟಾಣಿ, ಬೀನ್ಸ್ ಮತ್ತು ಕೊಬ್ಬು ಕಡಿಮೆ ಇರುವ ಆಹಾರವಸ್ತುಗಳನ್ನು ಸೇವಿಸಿ. ಸಂಸ್ಕರಿತ ಆಹಾರವಸ್ತುಗಳಲ್ಲಿ ಉಪ್ಪಿನಂಶ ಹೇರಳವಾಗಿರುವ ಕಾರಣ ಅವುಗಳನ್ನು ವರ್ಜಿಸಿ. ನೀರು ಕುಡಿಯಿರಿ
ಹೃದಯ ಸಂಬಂಧಿ ತೊಂದರೆಗಳನ್ನು ತಡೆಗಟ್ಟಲು ಸಮತೋಲನ ಆಹಾರ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಗಳು, ವಿಶೇಷವಾಗಿ ಬಾದಾಮಿ ಬಟರ್ ಫ್ರೂಟ್, ಕಿತ್ತಳೆಗೆ
ಬ್ಲೂಬೇರಿ ಸ್ಟ್ರಾಬೆರಿ, ಟೊಮೇಟೊ ಗ್ರೀನ್ ಟೀ ಯೋಗ, ಧ್ಯಾನ, ಪ್ರಾಣಾಯಾಮ, ದಿನಚರ್ಯ ಹಾಗೂ ಋತುಚರ್ಯ ಅಳವಡಿಸಿಕೊಂಡರೆ ಉತ್ತಮ.
ಈ ವರ್ಷದ ಧ್ಯೇಯವಾಕ್ಯ
ವಿಶ್ವ ಹೃದಯ ದಿನದ 2022 ರ ಥೀಮ್ `ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ’. ವಲ್ರ್ಡ್ ಹಾರ್ಟ್ ಫೆಡರೇಶನ್ ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ರಚಿಸಿದೆ
ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ, ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸೋಣ. ಇಂದು ಹೃದಯ ದಿನದ ಸಲುವಾಗಿ ವಿಶ್ವದಾದ್ಯಂತ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಇಂದು ವಿಶ್ವ ಹೃದಯ ದಿನ ಇರುವುದೊಂದೇ ಹೃದಯ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳೊಣ
ವಿಶೇಷ ಲೇಖನ: ಡಾ ವಿಜಯ್ ನೆಗಳೂರ್
ಪ್ರಥಮ ಕ್ಲಿನಿಕ್
(ಸಂಜೆ 5.30 ರಿಂದ 8 ರ ವರೆಗೆ )
ಕೆಮ್ಮಣ್ಣು ಉಡುಪಿ
7892618108