ಉಡುಪಿ ಜಿಲ್ಲೆಯ ರಜತ ವರ್ಷದ ಸವಾಲುಗಳು
ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ,ಅಂಕಣಕಾರರು
(ವಿಶೇಷ ಲೇಖನ)
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಎರಡು ಜಿಲ್ಲೆ ಗಳಾಗಿ ಪ್ರತ್ಯೇಕಿಸುವ ಮೂಲ ಉದ್ದೇಶವೇ ಆಡಳಿತಾತ್ಮಕ ಮತ್ತು ಅಭಿವೃದ್ಧಿಯ ಕಾರ್ಯಗಳಿಗೆ ಹೆಚ್ಚು ಅನುಕೂಲವಾಗ ಬೇಕೆನ್ನುವುದೆ ಮುಾಲ ಗುರಿಯಾಗಿತ್ತು.ಆಡಳಿತದ ನೆಲೆಯಲ್ಲಿ ಸಾಕಷ್ಟು ಅನುಕೂಲಕರವಾದ ಸವಲತ್ತುಗಳು ಉಡುಪಿ ಜಿಲ್ಲೆಯಾಗಿ ಜನರಿಗೆ ಸಿಕ್ಕಿದೆ ಅನ್ನುವುದು ನಮ್ಮೆಲ್ಲರಿಗೂ ತೃಪ್ತಿ ನೀಡಿದೆ.
ಆದರೆ ಉಡುಪಿ ಜಿಲ್ಲೆಯಾಗಿ 25 ವಷ೯ಗಳು ಕಳೆದರೂ ಕೆಲವೊಂದು ಕ್ಷೇತ್ರದಲ್ಲಿ ಸಮಸ್ಯೆಗಳು ಇನ್ನೂ ಜೀವಂತವಾಗಿಯೆ ಇದೆ ಅನ್ನುವುದು ಉಡುಪಿ ಜಿಲ್ಲೆಯ ಜನರ ಮನದಾಳದ ನೇೂವು ಕೂಡಾ .ಬಹು ಮುಖ್ಯವಾಗಿ ಉದ್ಯೋಗ ಸೃಷ್ಟಿ ಯಲ್ಲಿ ಜಿಲ್ಲೆಗೆ ಯಾವುದೇ ದೊಡ್ಡ ಮಟ್ಟದ ಕಂಪನಿಗಳು ಬರಲೇ ಇಲ್ಲ.ಶಿಕ್ಷಣ ರಂಗದಲ್ಲಿ ಸಾಕಷ್ಟು ಪ್ರತಿಭಾವಂತರನ್ನು ರೂಪಿಸಿದ ಹೆಗ್ಗಳಿಕೆಗೆ ನಮ್ಮ ಜಿಲ್ಲೆಗೆ ಇದೆ..ಆದರೆ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೊ ಬೇರೆ ರಾಜ್ಯಗಳಿಗೊ ವಿದೇಶಗಳ ಕಡೆಗೆ ಮುಖ ಮಾಡ ಬೇಕಾಗಿದೆ ಅನ್ನುವುದು ಪ್ರತಿಭಾವಂತ ವಿದ್ಯಾರ್ಥಿಗಳ ಅಳಲು ಹೌದು.
ಕೃಷಿಗೆ ಬೇಕಾಗುವ ಮೂಲ ಸೌಕರ್ಯಗಳಾದ ಮಾರುಕಟ್ಟೆ ನೀರಾವರಿ ಯೇೂಜನೆಗಳು ಇನ್ನೂ ಸಮಸ್ಯೆಯಾಗಿ ಮುಂದುವರಿದಿರುವುದು ವಿಷಾಧನೀಯ ಸಂಗತಿ..ಇದಕ್ಕೆ ಜೀವಂತ ನಿದಶ೯ನ ವೆಂದರೆ ವಾರಾಹಿ ನೀರಾವರಿ ಯೇೂಜನೆ ಕುಂದಾಪುರದ ರೆೈತರಿಗೂ ಸಂಪೂರ್ಣವಾಗಿ ಪ್ರಯೇೂಜನಕ್ಕೆ ಸಿಗದ ಪರಿಸ್ಥಿತಿ.
ಬ್ರಹ್ಮಾವರದ ಕಬ್ಬು ಕಾಖಾ೯ನೆಗೆ ಮರು ಜೀವ ಕೊಡಲು ಸಾದ್ಯವಿಲ್ಲ ಅನ್ನುವ ತೀಮಾ೯ನಕ್ಕೆ ಸರ್ಕಾರ ಇದಾಗಲೇ ಬಂದಿದೆ.ಇಂದು ಕೃಷಿ ಭೂಮಿಗಳು ವಾಣಿಜ್ಯ ಸೆೆೈಟುಗಳಾಗಿ ಪರಿವತ೯ನೆಯಾಗಿ…ಕೃಷಿ ಭೂಮಿ ಹಡಿಲು ಭೂಮಿಯಾಗುವ ಕರುಣಾಜನಕ ಸ್ಥಿತಿ. ಈ ದಿಸೆಯಲ್ಲಿ ಉಡುಪಿ ಅಭಿವೃದ್ಧಿ ನಕಾಶೆಯಲ್ಲಿ ಪ್ರಮುಖವಾಗಿ ಒತ್ತು ನೀಡ ಬೇಕಾಗಿದೆ. ಉಡುಪಿ ಜಿಲ್ಲೆಯ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳು ಬರೆ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗದೆ ತೀರ ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಕುಂದಾಪುರದ ಮೂಲೆ ಮೂಲೆಗೂ ವಿಸ್ತರಣೆ ಮಾಡ ಬೇಕು.ಇಲ್ಲದೇ ಹೇೂದರೆ ಈ ಅಸಮತೇೂಲನ ನೀತಿ ಬೆಳವಣಿಗೆಯ ಕಾರಣಕ್ಕಾಗಿಯೇ ಕುಂದಾಪುರದ ಕಡೆ ಪ್ರತ್ಯೇಕ ಜಿಲ್ಲೆಯಾಗ ಬೇಕು ಅನ್ನುವ ಧ್ವನಿ ಎತ್ತಿರುವುದು.
ಸರಕಾರಿ ಮೆಡಿಕಲ್ ಕಾಲೇಜಿನ ಅನಿವಾರ್ಯತೆ ಇದೆ.ಇದನ್ನು ಕುಂದಾಪುರದ ಕಡೆಗೆ ಮಹತ್ವ ಕೊಟ್ಟು ಸ್ಥಾಪನೆಗೆ ಮುಂದಾಗುವುದು ಉಚಿತ.ಜಿಲ್ಲೆಗೊಂದು ವಿಮಾನ ನಿಲ್ದಾಣದ ಅನಿವಾರ್ಯತೆ ಇದೆ.ಇದರಿಂದಾಗಿ ಪ್ರವಾಸೋದ್ಯಮ ಉದ್ಯೋಗ ಸೃಷ್ಟಿ ಇನ್ನಷ್ಟು ಅಭಿವೃದ್ಧಿ ಹೊಂದಲು ಪೂರಕವಾದ ಪರಿಸರ ನಿಮಾ೯ಣಗೊಳ್ಳುತ್ತದೆ..ಅನ್ನುವುದು ನಮ್ಮೆಲ್ಲರ ಅಭಿವೃದ್ಧಿಯ ಚಿಂತನೆಯ ಬೇರುಗಳು.
Good information Udupi