ಶ್ರೀಕೃಷ್ಣ ಜನ್ಮಾಷ್ಟಮಿಗೆ ಪರ್ಯಾಯಶ್ರೀಗಳ ಸಂದೇಶ…

ಉಡುಪಿ ಆ.18 (ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ ಸಂಭ್ರಮದಿಂದ ಆಚರಿಸುವ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದೇಶ ನೀಡಿದ್ದಾರೆ.

ಪ್ರಕಟಣೆ ಮೂಲಕ ಸಂದೇಶ ನೀಡಿರುವ ಅವರು, ಕರ್ಮಣ್ಯೇವಾಧಿಕಾರಸ್ತೇ…. ಮನುಷ್ಯನಾದವ ಫಲಾಪೇಕ್ಷೆಯನ್ನು ಇಟ್ಟುಕೊಳ್ಳದೇ ಕರ್ಮವನ್ನು ಮಾಡಬೇಕು. ಆ ಕರ್ಮವು ಕೃಷ್ಣಪ್ರೀತಿಯ ಉದ್ದೇಶವನ್ನು ಹೊಂದಿರಬೇಕು. ಆಗ ಮಾತ್ರ ಅದು ಬಂಧಕರೂಪವನ್ನು ತಾಳುವುದಿಲ್ಲ. ಫಲಾಪೇಕ್ಷೆಯ ಆಗ್ರಹ ಮತ್ತು ಅಭಿಮಾನ ಸೇರಿದರೆ ವಿಷ್ಣು ಪ್ರೀತಿ ಎನ್ನುವುದು ಮರೀಚಿಕೆಯಾಗುತ್ತದೆ. ಆದುದರಿಂದ ಕರ್ತೈತ್ವಾದಿ ಅಭಿಮಾನ ತ್ಯಾಗ ಪೂರ್ವಕ ಕರ್ಮವನ್ನು ಮಾಡಬೇಕು. ಆ ಕರ್ಮವು ವಿಷ್ಣುಪೂಜಾತ್ವೇನ ಸತ್ಕರ್ಮವಾಗಿ ವಿಷ್ಣು ಪ್ರೀತಿ ಸಂಪಾದಿಸುವಲ್ಲಿ ಕಾರಣವಾಗುತ್ತದೆ. ಫಲಾಫಲಗಳು ದೈವಾಧೀನ. ಕರ್ಮ ಮಾಡುವಲ್ಲಿ ಮಾತ್ರ ಮನುಷ್ಯನಿಗೆ ಅವಕಾಶ ಉಂಟು. ಅಂತಹ ಸದವಕಾಶವನ್ನು ಭಗವಂತನ ಪ್ರೀತಿಗಾಗಿ ಯಥೋಚಿತ ಉಪಯೋಗಿಸಿ ಎಲ್ಲರೂ ಶ್ರೀಕೃಷ್ಣಾನುಗ್ರಹ ಭಾಜನರಾಗಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!