ಅಮರಾವತಿ :ಅನಾಥ ಶವಕ್ಕೆ ಹೆಗಲಾದ ಖಾಕಿ

ಅಮರಾವತಿ : ಆಂದ್ರ ಪ್ರದೇಶದಲ್ಲಿ ಅನಾಥ ಶವವನ್ನು ಭುಜದ ಮೇಲೆ ಇರಿಸಿ ಎರಡು ಕಿಲೋ ಮೀಟರ್ ದೂರ ನಡೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ ಮಹಿಳಾ ಪಿಎಸ್ ಐ ಅವರ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 


ಆಂಧ್ರಪ್ರದೇಶದ ಕಾಸಿಬುಗ್ಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಮಹಿಳಾ ಪಿಎಸ್ ಐ ಕೆ.ಸಿರಿಶಾ  ಮಾನವೀಯತೆ ಮೆರೆದು ಮೆಚ್ಚುಗೆಗೆ ಪಾತ್ರವಾಗಿರುವವರು. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅಡವಿ ಕೊಥುರ್ ಬಳಿ ಅಪರಿಚಿತ ವ್ಯಕ್ತಿಯ ಶವ ಇರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಪಿಎಸ್ ಐ ಸಿರಿಶಾ ತಕ್ಷಣ ಆ ಸ್ಥಳಕ್ಕೆ ತೆರಳಿದ್ದಾರೆ. ಮೃತ ವ್ಯಕ್ತಿ ಭಿಕ್ಷುಕನಾಗಿದ್ದ ಹಿನ್ನೆಲೆ ಯಾರೂ ಕೂಡಾ ಆತನಿಗೆ ಸಂಬಂಧಿಸಿದವರು ಇರಲಿಲ್ಲ.

ಈ ಹಿನ್ನೆಲೆ ಸಿರಿಶಾ ಅವರೇ ಸ್ವತಃ ಮುಂದೆ ಬಂದು ಕೆಲ ಸ್ಥಳೀಯರ ಜೊತೆಗೆ ಮೃತದೇಹಕ್ಕೆ ಹೆಗಲು ಕೊಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ. ಇದೀಗ    ಪಿಎಸ್ ಐ ಸಿರಿಶಾ ಅವರ ಈ ಕಾರ್ಯದ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!