ಉಡುಪಿ ತಾ.ಪಂ ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಉಡುಪಿ : ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಸ್ವಪ್ರೇರಣೆಯಿಂದ ಜೂನ್ 19 ರಂದು ಲಿಖಿತ ಅರ್ಜಿಯ ಮೂಲಕ ರಾಜೀನಾಮೆ ಸಲ್ಲಿಸಿದ್ದು, ಸದ್ರಿಯವರಿಗೆ ರಾಜಿನಾಮೆ ಸ್ವೀಕೃತವಾಗುವ ದಿನದಿಂದ 15 ದಿನಗಳೊಳಗೆ ರಾಜೀನಾಮೆಯನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸದ್ರಿಯವರು ಕಲ್ಪಿಸಲಾಗಿರುವ ಕಾಲಾವಕಾಶದಲ್ಲಿ ರಾಜೀನಾಮೆ ಹಿಂದಕ್ಕೆ ಪಡೆಯಲು ಲಿಖಿತವಾಗಿ ಮನವಿ ಸಲ್ಲಿಸಿರುವುದಿಲ್ಲ.

    ಆದುದರಿಂದ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ನಳಿನಿ ಪ್ರದೀಪ್ ರಾವ್ ನೀಡಿರುವ ರಾಜೀನಾಮೆಯನ್ನು ಈ ಮೂಲಕ ಅಂಗೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!