ವಿಕೆಂಡ್ ಮಸ್ತಿ… ಕೆಸರ್ಡ್ ಗೊಬ್ಬುಗ

ಉಡುಪಿ: ಹಿಂದೆ ಕೆಲಸರಿನಲ್ಲಿ ಮೈಯೊಡ್ಡಿ ದುಡಿಯೋದು ಅನಿವಾರ್ಯವಾಗಿತ್ತು. ಈಗೀನ ಆಧುನಿಕ ಜೀವನ ಶೈಲಿಯಲ್ಲಿ ಏನಿದ್ರೂ ತ್ರಿಡಿ ಇಪೆಕ್ಟ್ . ಅದೇನೇ ಇದ್ರೂ ಮಳೆಗಾಲದಲ್ಲಿ ಕೆಲಸರಿನಲ್ಲಿ ಮಿಂದೆಳುವುದು ಅಂದ್ರೆ ಯಾರಿಗ್ತಾನೇ ಇಷ್ಟ ಇಲ್ಲ ಹೇಳಿ.

 ಇತ್ತೀಚಿನ ದಿನಗಳಲ್ಲಿ ಗ್ರಾಮಿಣ ಸೊಗಡನ್ನು ಉಳಿಸುವ ದೃಷ್ಟಿಯಿಂದ ಕೆಸರಿನ ಆಟದ ಕಾರ್‍ಯಕ್ರಮವನ್ನು  ಕೆಂತ್ತೂರಿನಲ್ಲಿ ಆಯೋಜಿಸಲಾಗಿತ್ತು. ಸಾಧನಾ ಯುವಕ ಮಂಡಲ ಮತ್ತು ಸಾಧನ ಯುವತಿ ಮಂಡಲ ಕೆಂತ್ತೂರು ವತಿಯಿಂದ ನಡೆದ ಹೌದು “ಕೆಸರ್‍ಡ್ ಗೊಬ್ಬುಗ” ಕಾರ್‍ಯಕ್ರಮದಲ್ಲಿ ಮಕ್ಕಳೊಂದಿಗೆ ಯುವಜನರು ಕೆಸರಿನಲ್ಲಿ ಮಿಂದೆದ್ದರು.

ಕೆಸರಿನ ಗಮತ್ತು ತಿಳಿಬೇಕಾದ್ರೆ ಕೆಸರು ಗದ್ದೆಗೆ ಇಳಿಬೇಕು, ಒಬ್ಬರಿಂದ ಒಬ್ಬರಿಗೆ ಕೆಸರೆರೆಚಾಟಾ ಇರ್‍ಬೇಕು. “ಕೆಸರ್‍ಡ್ ಗೊಬ್ಬುಗದ ಶ್ರೀಮಂತಿಕೆ ಹೆಚ್ಚಿಸಿದ ಕೆಲ ಸ್ಪರ್ಧೆಗಳು. ವಾರಪೂರ್ತಿ ಕೆಲಸದಿಂದ ಬ್ಯೂಸಿಯಿದ್ದ ಯುವಜನತೆ ವಿಕೆಂಡ್ ಮಾತ್ರ ಸಕತ್ ಮಜಾ ಮಾಡಿದರು.

ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಹಾಗೇ ಕೆಸರುಗದ್ದೆಯಿಂದಲೇ ಗಮ್ಮತ್ತು ಅನ್ನೋ ಹಾಗಿತ್ತು ಈ ದಿನ .  ಒಟ್ಟಾರೆ ವಯಸ್ಸಿನ ಅಂತರವಿಲ್ಲದೇ ಕೆಂತ್ತೂರಿನ ಜನ ಕೆಸರಿನಲ್ಲಿ ಮಿಂದೆದ್ದರೂ.

ಕಾರ್‍ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಶ್ರೀಕಾಂತ್ ನಾಯಕ್, ಜಯರಾಂ ಶೆಟ್ಟಿ, ಸುಂದರ್ ಮಾಸ್ಟರ್, ಪ್ರಭಾಕರ್ ಹೆಗ್ಡೆ, ಜಯಲಕ್ಷ್ಮೀ, ಪ್ರಸನ್ನ ಶೆಟ್ಟಿ, ಅನುಸೂಯ, ಕೃಷ್ಣ ಜತ್ತನ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!