ಉಡುಪಿ: ಹೈನುಗಾರಿಕೆ ಮತ್ತು ವೈಜ್ಞಾನಿಕ ಕೃಷಿ ಮಾಹಿತಿ ಶಿಬಿರ

ಉಡುಪಿ ಜೂ.6 (ಉಡುಪಿ ಟೈಮ್ಸ್ ವರದಿ): ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ ಕುಕ್ಕಿಕಟ್ಟೆ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘದ ಸಹಭಾಗಿತ್ವದಲ್ಲಿ ಇಂದು ಕೆಮ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಹೈನುಗಾರಿಕೆ ಮತ್ತು ವೈಜ್ಞಾನಿಕ ಕೃಷಿ ಮಾಹಿತಿ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ ರಾಜ್ ಅವರು ಮಾತನಾಡಿ, ಸಮಗ್ರ ಕೃಷಿ ನಡೆಸಿದರೆ ಮಾತ್ರ ರೈತರಿಗೆ ಆದಾಯ ಬರುತ್ತದೆ. ಹಾಗಾಗಿ ರೈತರು ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿದರೆ ಬೆಲೆ ಹೆಚ್ಚಾಗುತ್ತದೆ ಎಂದು ಕೃಷಿ ಬಗ್ಗೆ ಮಾಹಿತಿ ನೀಡಿದರು ಹಾಗೂ ಕೊಂರಂಗ್ರಪಾಡಿ ಸೊಸೈಟಿಯಿಂದ ಉತ್ತಮ ಕೆಲಸಗಳು ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಈ ಸೊಸೈಟಿಯಿಂದ ಕೃಷಿಗೆ ಸಂಬಂಧಿಸಿ ಬಿತ್ತನೆ ಬೀಜ ವಿತರಣೆ  ಸೇರಿದಂತೆ ಮೊದಲಾದ ಸಹಕಾರವು ಸಿಗುವಂತಾಗಲಿ ಎಂದು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಕೃಷಿಕರಾದ ಕೆಮ್ತೂರಿನ ಜಯರಾಮಶೆಟ್ಟಿ, ಪ್ರಭಾಕರ ಹೆಗ್ಡೆ, ವೈ ಜಯಂತಿ ಭಟ್, ಫ್ರಾಂಕಿ ಕಾರ್ಡೋಜ, ಸುಂದರ ಪೂಜಾರಿ, ಜಯಶಂಕರ ಶೆಟ್ಟಿ, ಗಣೇಶ್ ಶೆಟ್ಟಿ, ಅಶೋಕ ಶೆಟ್ಟಿ, ಎಂಜಲೀನಾ ಕಾರ್ಡೋಜ, ಲಕ್ಷ್ಮಣ ಪೂಜಾರಿ, ಶ್ರೀಧರ ಶೆಟ್ಟಿ, ಜಗದೀಶ ಶೆಟ್ಟಿ, ರವೀಂದ್ರ ಕೆ. ಶೆಟ್ಟಿ, ಹರೀಶ್ ಪೂಜಾರಿ, ಸುಂದರ ಶೆಟ್ಟಿ, ಉಮೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾದ್ಯಾಯ ಕೆಮ್ತೂರು ಸುಂದರ ಶೆಟ್ಟಿ, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಶೇರಿಗಾರ್ ಅಲೆವೂರು, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಯತೀಶ್ ಅಲೆವೂರು, ಸತೀಶ್ ದೇವಾಡಿಗ, ಚಂದ್ರಹಾಸ ಶೆಟ್ಟಿ, ಸಿಇಓ ಶೇಖರ್ ಸುವರ್ಣ ಮಾರ್ಪಳ್ಳಿ ಉಪಸ್ಥಿತರಿದ್ದರು. ನಿರ್ದೇಶಕ ಅಶೋಕ್ ಕುಮಾರ್ ಭಂಡಾರಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!