ಮಲ್ಪೆ: ನೀರುಪಾಲಾಗುತ್ತಿದ್ದ ಆರು ಮಂದಿ ಪ್ರವಾಸಿಗರ ರಕ್ಷಣೆ

ಮಲ್ಪೆ ಜೂ.6 (ಉಡುಪಿ ಟೈಮ್ಸ್ ವರದಿ): ಕಳೆದೆರಡು ದಿನಗಳಲ್ಲಿ ಮಲ್ಪೆ ಕಡಲ ತೀರದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದ ಆರು ಮಂದಿ ಯುವಕರನ್ನು ಮಲ್ಪೆ ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
 
ಬಿಜಾಪುರ ಮೂಲದ ಮೊನಿನು, ಸೋಫಿಯಾ ಅಹ್ಮದ್, ಮೊಹಮ್ಮದ್ ರಕ್ಷಿಸಲ್ಪಟ್ಟವರು. ರಕ್ಷಣೆ ಮಾಡಿರುವ ಎಲ್ಲಾ ಪ್ರವಾಸಿಗರು 28 ರಿಂದ 30 ವರ್ಷ ವಯಸ್ಸಿನರಾಗಿದ್ದಾರೆ. ಇಂದು ಮಲ್ಪೆ ಕಡಲ ತೀರಕ್ಕೆ ಬಂದಿದ್ದ ಬಿಜಾಪುರ ಮೂಲದ ಯುವಕರು ನೀರಿಗೆ ಇಳಿದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಈ ವೇಳೆ ಲೈಫ್ ಗಾರ್ಡ್ ನ ಸಿಬ್ಬಂದಿಗಳು ತಕ್ಷಣ ಯುವಕರನ್ನು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆಕರೆತಂದಿದ್ದಾರೆ.

ನಿನ್ನೆಯೂ ಮಲ್ಪೆ ಕಡಲ ಕಿನಾರೆಗೆ ಪ್ರವಾಸಕ್ಕೆಂದು ಬಂದಿದ್ದ ಉತ್ತರ ಕರ್ನಾಟಕ ಭಾಗದ ಪ್ರವಾಸಿಗರು ಸಮುದ್ರಕ್ಕಿಳಿದು ಈಜುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಇಬ್ಬರು ಮುಳುಗಲಾರಂಭಿಸಿದರು. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಜೀವರಕ್ಷಕ ದಳದ ಸಿಬ್ಬಂದಿಗಳು ಇಬ್ಬರನ್ನು ಮೇಲೆತ್ತಿ ರಕ್ಷಿಸಿದ್ದಾರೆ. ಈ ಪ್ರವಾಸಿಗರ ಪೈಕಿ ಕೆಲವರು ಅತೀಯಾಗಿ ಮಧ್ಯೆ ಸೇವಿಸಿದ್ದರು ಎನ್ನಲಾಗಿದೆ.  

ಕಳೆದ ಕೆಲ ದಿನಗಳಿಂದ ಕಡಲು ಪ್ರಕ್ಷುಬ್ಧವಾಗಿದ್ದು, ಮಲ್ಪೆ ಕಡಲ ಕಿನಾರೆಯಲ್ಲಿ ಅಲೆಗಳ ಅಬ್ಬರಕ್ಕೆ ಹೆಚ್ಚಾಗಿದೆ. ಇದೀಗ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗಿ ನೀರು ಪಾಲಾಗುತ್ತಿದ್ದ ಆರು ಮಂದಿಯನ್ನು ಜೀವರಕ್ಷಕ ದಳದ ಸಿಬ್ಬಂದಿಗಳು ಸಮಯಪ್ರಜ್ಞೆ ಮರೆದು ಅಪಾಯದಲ್ಲಿದ್ದ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!