ಹೆಬ್ರಿ: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧಕ ನಿತ್ಯಾನಂದ ಶೆಟ್ಟಿಗೆ ಸನ್ಮಾನ 

ಹೆಬ್ರಿ, ಜೂ.5: ನಿರಂತರ ಪರಿಶ್ರಮ ಇದ್ದಾಗ ಯಶಸ್ಸು ಖಂಡಿತ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕ್ರೀಡಾ  ತರಬೇತಿ ನೀಡಿ ನೂರಾರು ವಿದ್ಯಾರ್ಥಿಗಳನ್ನು ರಾಷ್ಟ್ರ ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವುದರ ಜತೆಗೆ ತಾನೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ನಾಡಿಗೆ ಹೆಮ್ಮೆತಂದ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ಅವರ ಕ್ರೀಡಾ ಸಾಧನೆ ಶ್ಲಾಘನೀಯ ಎಂದು ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷ  ಸೀತಾನದಿ ವಿಟಲ್ ಶೆಟ್ಟಿ ಹೇಳಿದರು. 

ಅವರು ರಂದು ಹೆಬ್ರಿ ರೈತಸೇವಾ ಗ್ರಾಮೋದ್ಯೋಗ ಪರಿಸರದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಸೈಕಲ್  ದಿನಾಚರಣೆ ಅಂಗವಾಗಿ ಹೆಬ್ರಿ ಬೈಸಿಕಲ್ ರೈಡರ್ಸ್ ಆರ್ಗನೈಜೇಶನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ ನಡೆದ ಸೈಕಲ್ ಜಾಥಾ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕುಚ್ಚೂರು ಹೆರ್ಗ ವಿಠಲ ಶೆಟ್ಟಿ ಪ್ರೌಢಶಾಲೆಯ ಶಿಕ್ಷಕ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ ಅವರನ್ನು ಸಮ್ಮಾನಿಸಿ ಮಾತನಾಡಿದರು.ವಿದ್ಯಾರ್ಥಿಗಳ ಪ್ರೀತಿ ಹಾಗೂ ಸರ್ವರ ಪ್ರೇರಣೆ ಕ್ರೀಡೆಯಲ್ಲಿ ಸಾಧನೆಗೈಯಲು ಕಾರಣವಾಗಿದೆ.

ಒಳ್ಳೆಯದನ್ನು ಗುರುತಿಸಿ ಗೌರವಿಸುವ  ಜನರ ಪ್ರೀತಿಗೆ ಚಿರರುಣಿಯಾಗಿದ್ದೇನೆ. ಹೆಬ್ರಾಯಿಕ್ ಸಂಸ್ಥೆ ನೀಡಿದ ಟೀ ಶರ್ಟ್ ಧರಿಸಿ ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೆ ಅದುವೇ ನನಗೆ ಅದೃಷ್ಟವಾಗಿ ಪರಿಣಮಿಸಿದೆ ಎಂದು ಸಮ್ಮಾನ ಸ್ವೀಕರಿಸಿದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧಕ ಕುಚ್ಚೂರು ಹೆರ್ಗ ವಿಟಲ್ ಶೆಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಶೆಟ್ಟಿ ಹೇಳಿದರು.

ಸಮಾರಂಭದಲ್ಲಿ ಮುನ್ ಆಗುಂಬೆಯ ಕಾಳಿಂಗ ಪೌಂಡೇಷನ್ ನ ಪ್ರಶಾಂತ್, ಸಂಸ್ಥೆಯ ಗೌರವಾಧ್ಯಕ್ಷ ಡಾ. ರಾಮಚಂದ್ರ ಐತಾಳ್, ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಟಿಜಿ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!