ಉಡುಪಿ: ದೇವಸ್ಥಾನಗಳಲ್ಲಿ ಪರಿಚಾರಕರ ಪಾತ್ರ ಅತ್ಯಂತ ಮಹತ್ವದ್ದು- ಕುತ್ಯಾರ್ ಪ್ರಸಾದ್ ಶೆಟ್ಟಿ

ಉಡುಪಿ: ಒಂದು ದೇವಸ್ಥಾನ ಅನ್ನೋದು ಅನೇಕ ಆಯಾಮಗಳನ್ನೊಳಗೊಂಡ ಸಂಕೀರ್ಣ ವ್ಯವಸ್ಥೆಯಾಗಿದೆ .ಇಲ್ಲಿ ಅರ್ಚಕರು ಬಿಂಬದಲ್ಲಿ ಸಾನ್ನಿಧ್ಯ ತುಂಬಲು ಪೂಜಾದಿ ಕೈಂಕರ್ಯಗಳನ್ನು ನಿರ್ವಹಿಸಿದರೆ ಹೊರಭಾಗದಲ್ಲಿ ಪರಿಚಾರಕ ವರ್ಗ ಉಳಿದ ಎಲ್ಲ ವ್ಯವಸ್ಥೆಗಳ ಅಚ್ಚುಕಟ್ಟು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಅರ್ಚಕರು ಮತ್ತು ಪರಿಚಾರಕರದ್ದು ಒಂದರ್ಥದಲ್ಲಿ ತಪಸ್ಸೇ ಆಗಿದೆ.‌ ಮಳೆ ಚಳಿ ಎನ್ನದೆ, ಭಾನುವಾರ ರಜಾದಿನ ಎನ್ನದೇ ನಿತ್ಯ ನಿರಂತರವಾಗಿ ಲೋಕದ ಒಳಿತಿಗೆ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸೋದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಪರಿಚಾರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಧಾರ್ಮಿಕ ಚಿಂತಕ ಕುತ್ಯಾರ್ ಪ್ರಸಾದ್ ಶೆಟ್ಟಿ ಹೇಳಿದರು.

ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭಹಮ್ಮಿಕೊಂಡ ದೇವಸ್ಥಾನಗಳ ಪರಿಚಾರಕರ ಸಮಾವೇಶದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ದೇವಸ್ಥಾನದ ವ್ಯವಸ್ಥೆಗಳಲ್ಲಿ ಶತಶತಮಾನಗಳಿಂದ ಪರಿಚಾರಕರ ಪಾತ್ರವನ್ನು ಅರ್ಥಪೂರ್ಣವಾಗಿ ವಿವರಿಸಿ ಮಾತನಾಡಿದರು. ಪರಿಚಾರಕರ ಸಮ್ಮೇಳನವನ್ನು ಕಡಿಯಾಳಿ ದೇವಳದಲ್ಲಿ ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೃಷ್ಣರಾಜ್ ದೀಪಬೆಳಗಿಸಿ ಉದ್ಘಾಟಿಸಿದರು.‌

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್ ಆಚಾರ್ಯ ವಹಿಸಿದ್ದರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ ನಾಗೇಶ ಹೆಗ್ಡೆ ಜಿಲ್ಲಾ ಧಾರ್ಮಿಕ ಪರೊಷತ್ ಸದಸ್ಯರಾದ ವಾಸುದೇವ ಹಂಗಾರಕಟ್ಟೆ, ಶಾಲಿನಿ ಸುರೇಶ್ ಕೆ,ಮೋಹನ ಉಪಾಧ್ಯ, ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಅಭ್ಯಾಗತರಾಗಿ ಮುಜರಾಯಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ಆಯುಕ್ತರಾದ ರವೀಂದ್ರ ರಾವ್ ಮಾರ್ಗದರ್ಶನದ ನುಡಿಗಳನ್ನಾಡಿದರು. ಕಡಿಯಾಳಿ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಕುಸುಮಾ, ನಯನಾರಾಘವೇಂದ್ರ ಮತ್ತು ಲಲಿತಾ ಅವರನ್ನು ಸಂಮಾನಿಸಲಾಯಿತು.‌ ಸಾಮಾಜಿಕ ಧುರೀಣ ರಾಮಚಂದ್ರ ಸನಿಲ್ ಸ್ವಾಗತಿಸಿರು.‌ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಸಾಲ್ಯಾನ್ ವಂದಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ‌ ನಿರೂಪಿಸಿದರು .‌

Leave a Reply

Your email address will not be published. Required fields are marked *

error: Content is protected !!