ಜೂ.3- ಉಡುಪಿಯಲ್ಲಿ ಬೈಸಿಕಲ್ ಜಾಥಾ

ಉಡುಪಿ ಜೂ.2(ಉಡುಪಿ ಟೈಮ್ಸ್ ವರದಿ): ಭಾರತ ಸರ್ಕಾರದ ಸಂಸ್ಕøತಿ ಸಚಿವಾಲಯ ಹಾಗೂ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಜಂಟಿ ಆಶ್ರಯದಲ್ಲಿ ದೇಶದ ಆಜಾದಿಕಾ ಅಮೃತ ಮಹೋತ್ಸವದ ಪ್ರಯುಕ್ತ ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಜೂ.3 ರಂದು ಉಡುಪಿಯಲ್ಲಿ ಬೈಸಿಕಲ್  ಜಾಥಾವನ್ನು ಆಯೋಜಿಸಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಲಾಗಿದ್ದು, ಈ ಜಾಥಾವನ್ನು ಉಡುಪಿಯಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಬೆಳಿಗ್ಗೆ 6.30ಕ್ಕೆ ಹಸಿರು ನಿಶಾನೆ ಕೋರಿ 150 ರಿಂದ 200 ಸೈಕಲ್ ಸವಾರರಿರುವ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಈ ರ್ಯಾಲಿಯಲ್ಲಿ 13 ಕಿ.ಮೀ ಉದ್ದದ ದಾರಿಯನ್ನು ಕ್ರಮಿಸಿ ಸೈಕಲ್ ಸವಾರರು ಸರಿ ಸುಮಾರು ಬೆಳಿಗ್ಗೆ 7.30ರ ನಂತರ ಮಲ್ಪೆಯ ಐತಿಹಾಸಿಕ ಮಹತ್ಮಾ ಗಾಂಧೀ ಪ್ರತಿಮೆಯ ಹತ್ತಿರ ತಲುಪಿ ರ್ಯಾಲಿಯನ್ನು ಅಂತ್ಯಗೊಳಿಸಲಾಗುವುದು.

ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸೈಕಲಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದಂತಹ 4 ವ್ಯಕ್ತಿಗಳನ್ನು ಗೌರವಿಸಲಾಗುವುದು. ಹಾಗೂ ಸದೃಡ ಆರೋಗ್ಯಕ್ಕೆ ಸೈಕಲಿಂಗ್ ಹೇಗೆ ಉಪಕಾರಿಯಾಗುವುದು ಎಂಬ ಬಗ್ಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ವಿಮರ್ಶೆ ನಡೆಯಲಿದೆ. ಕೋವಿಡ್ -19 ನಂತರ ಬೈಸಿಕಲ್ ಸವಾರಿಯು ಸುದೃಡ ಆರೋಗ್ಯ ಹಾಗೂ ಮಾನಸಿಗೆ ತುಂಬಾ ಉಪಕಾರವಾಗಿದ್ದು, ಹೆಚ್ಚಿನ ಸಂಸ್ಥೆಗಳು ಈ ವಿಚಾರವನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಲು ಜಾಗೃತಿಯನ್ನು ಮೂಡಿಸುತ್ತಿದೆ.

ಬೈಸಿಕಲ್ ಸವಾರಿಯ ಮಹತ್ವ ಮತ್ತು ಪ್ರಚಾರಕ್ಕಾಗಿ ವಿಶ್ವದಾಧ್ಯಂತ ಬೈಸಿಕಲ್ ದಿನಾಚರಣೆಯನ್ನು ಜೂ.3 ರಂದು ನಡೆಸಲಾಗುತ್ತದೆ. ಈ ಬೈಸಿಕಲ್ ಜಾಥಾವನ್ನು ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ 623 ಜಿಲ್ಲೆಯ ಮುಖ್ಯ ವಲಯಗಳಲ್ಲಿ ಹಾಗೂ 75ನೇ ವಿಶಿಷ್ಠ ಮಹತ್ವದ ಕೇಂದ್ರಗಳಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಕರ್ನಾಟಕದ ವಿಶಿಷ್ಠ ಮಹತ್ವದ ಕೇಂದ್ರಗಳಾಗಿ ಆಯ್ಕೆಯಾಗಿರುವ ಉಡುಪಿ, ಮಂಗಳೂರು, ಕೊಡಗು, ಮೈಸೂರು, ಹಾಸನ ಬಲ್ಲಾರಿ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ನಡೆಲಾಗುತ್ತದೆ. ಸೈಕಲಿಂಗ್‍ನಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಂಸ ಪತ್ರವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!