ಕಡಿಯಾಳಿ ಬ್ರಹ್ಮಕಲಶೋತ್ಸವ: ವೈಭವದ ಹೊರೆಕಾಣಿಕೆ ಮೆರವಣಿಗೆಯ ಚಿತ್ರಗಳು…

ಚಿತ್ರಗಳು: ಉಮೇಶ್ ಮಾರ್ಪಳ್ಳಿ

ಉಡುಪಿ ಜೂ.2: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ವಿವಿಧ ಕಡೆಗಳಿಂದ ಸಂಗ್ರಹಿಸಲಾದ ಹೊರೆಕಾಣಿಕೆಯನ್ನು ಬುಧವಾರ ದೇವಾಲಯಕ್ಕೆ ಸಮರ್ಪಿಸಲಾಯಿತು.

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದಲ್ಲಿ ಜೂ.1ರಿಂದ 10ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಜೂ.1ರ ಸಂಜೆ 4ಕ್ಕೆ ಹೊರಕಾಣಿಕೆಯ ಭವ್ಯಮೆರವಣಿಗೆಯನ್ನು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಬೆಳ್ಳಿದ್ವಾರ ಹಾಗೂ ಶಿಖರವನ್ನಿಟ್ಟ ಟ್ಯಾಬ್ಲೋಕ್ಕೆ ಆರತಿಯನ್ನು ಬೆಳಕಿಸಿ ಮೆರವಣಿಗೆಯನ್ನು ಉದ್ಘಾಟಿಸಿದರು.

ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಜಿ. ಶಂಕರ್ ರವರು ಹನುಮ ಮುದ್ರಿತ ಪಾತಕೆಯನ್ನು ಮೇಲಕ್ಕೆತ್ತುವುದರ ಮುಖಾಂತರ ಮೆರವಣಿಯಲ್ಲಿ ಭಾಗವಹಿಸಿದ್ದ ವಾಹನಕ್ಕೆ ಚಾಲನೆ ನೀಡಿಸಿದರು.

ಮೆರವಣಿಗೆಯು ಜೋಡುಕಟ್ಟೆಯಿಂದ ಹಳೇ ಡಯಾನ ಸರ್ಕಲ್, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಬಿರುದಾವಳಿ, ಚಂಡೆ, ಡೋಲು, ವಾದ್ಯ, ಪಂಚವಾದ್ಯ, ಘಟದಜ, ಸಾಂಸ್ಕೃತಿಕ ಜಾನಪದ ತಂಡಗಳು, ಹುಲಿವೇಷ, ವಿಶೇಷ ಆಕರ್ಷಣೆಯೊಂದಿಗೆ ದೇಗುಲಕ್ಕೆ ತಲುಪಿತು.

ಮೆರವಣಿಗೆ ಉದ್ದಕ್ಕೂ ವಿಶೇಷ ಆಕರ್ಷಣೆ….
ಮುಖ್ಯ ಆಕರ್ಷಣೆಯಾಗಿ ಸುಮಾರು 50 ವರ್ಷಗಳ ಹಿಂದೆ ಪ್ರಚಾರಕ್ಕಾಗಿ ಬಳಸುತ್ತಿದ್ದ ಎತ್ತಿನಗಾಡಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ, ಮಹಾರಾಷ್ಟ್ರದ ತ್ರ್ಯಂಬಕೇಶ್ವರ ದೇಗುಲ ಆಶ್ರಮದ ಬೃಹದಾಕಾರದ ಕೋಡುಗಳುಳ್ಳ ಎತ್ತು, ಪುಣೆಯ ವಿಶ್ವಘರ್ಜನ ಧೋಲ್ ಪಥಾಕ್, ಕಡಿಯಾಳಿ ಮಹಿಷಮರ್ದಿನಿ ದೇವಿಯ ಸ್ತಬ್ದಚಿತ್ರ, ನವದುರ್ಗೆಯರು ಸೇರಿದಂತೆ ವಿವಿಧ ದೇವರ ಸ್ತಬ್ಧಚಿತ್ರಗಳು, ಪೂರ್ಣಕುಂಭ ಕಲಶ ಹಿಡಿದ ಮಹಿಳೆಯರು, ಹುಲಿವೇಷ, ಕೀಲುಕುದುರೆ, ಸಾಂಪ್ರದಾಯಿಕ ಶೈಲಿಯಲ್ಲಿ ತಲೆಯಲ್ಲಿ ಅಕ್ಕಿಮುಡಿ ಹೊತ್ತ ಯುವಕರು, ಕೃಷಿ ಸಂಪ್ರದಾಯದಂತೆ ಮುಟ್ಟಾಳೆ ಧರಿಸಿದವರು, ಬಿರುದಾವಳಿ, ಚೆಂಡೆ, ಡೋಲು, ವಾದ್ಯ, ಪಂಚವಾದ್ಯ, ಘಟಧ್ವಜ, ವೈವಿಧ್ಯಮಯ ಸಾಂಸ್ಕೃತಿಕ ಜಾನಪದ ತಂಡಗಳ ವಿಶೇಷ ಆಕರ್ಷಣೆಗಳು ಮೆರವಣಿಗೆಗೆ ಮೆರುಗು ನೀಡಿದವು.

ಮೆರವಣಿಗೆಯಲ್ಲಿ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಪಿ.ಪುರುಷೋತ್ತಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ಕಟ್ಟೆ ರವಿರಾಜ್ ಆಚಾರ್ಯ, ಹೊರಕಾಣಿಕೆಯ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಉದ್ಯಮಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಬಾಲಕೃಷ್ಣ ಶೆಟ್ಟಿ, ಯಶಪಾಲ್ ಸುವರ್ಣ, ಜಯಕರ ಶೆಟ್ಟಿ ಇ೦ದ್ರಾಳಿ.

ಶ್ಯಾಮಲಾ ಕು೦ದರ್, ಸಾಯಿ ಬಾಬಾ ಮ೦ದಿರದ ದಿವಾಕರ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ವಿಜಯರಾಘವ ರಾವ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಶ್ರೀಧರ ಭಟ್, ಮುರಳೀಧರ ತ೦ತ್ರಿ ಪಣಿಯಾಡಿ, ಪುತ್ತಿಗೆ ಮಠದ ನಾಗರಾಜ್ ಆಚಾರ್ಯ, ಎ೦.ವಿಶ್ವನಾಥ ಭಟ್, ಜಿ ಎಸ್ ಬಿ ಸಮಾಜ ಪಿ.ವಿ.ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಹೊರಕಾಣಿಕೆಯ ಸಾಮಗ್ರಿಗಳನ್ನು ಜೋಡಿಸಿಡಲು ಕಡಿಯಾಳಿ ಶಾಲೆಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!