ಉಡುಪಿ: ಕಾನೂನು ಸೇವೆಗಳ ಅರಿವು ಹಾಗೂ ವನಮಹೋತ್ಸವ

ಉಡುಪಿ, ಆ.7: ನವ್ಯಚೇತನ ಎಜುಕೇಷನ್‌ ರೀಸರ್ಚ್ ವೆಲ್ಫೇರ್ ಟ್ರಸ್ಟ್‌ ಮತ್ತು  ಕಾನೂನು ಸೇವೆ ಹಾಗೂ ಉಡುಪಿ ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ಇವರ ಆಶ್ರಯದಲ್ಲಿ ಕಾನೂನಿನ ಬಗ್ಗೆ  ಅರಿವು ಮೂಡಿಸುವ ಕಾರ್ಯಕ್ರಮವು  ಎಲ್.ವಿ.ಪಿ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಇಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು  ನವ್ಯ ಚೇತನ  ಟ್ರಸ್ಟ್‌ ನ ಅಧ್ಯಕ್ಷರಾದ ಡಾ। ಶಿವಾನಂದ  ನಾಯಕ್  ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಉಡುಪಿ ಜಿಲ್ಲಾ ನ್ಯಾಯಾಧೀಶರಾದ   ಸಿ.ಎಮ್.ಜೋಷಿ  ಮತ್ತು  ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ  ನ್ಯಾಯಾಧೀಶರಾದ ಕಾವೇರಿ ಇವರು ಭಾಗವಹಿಸಿದ್ದರು.

ಸಿ.ಎಮ್. ಜೋಷಿ ಯವರು ಮಾತನಾಡುತ್ತಾ ಆಥಿ೯ಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ  ಮತ್ತು  ಹಿರಿಯ ನಾಗರಿಕರಿಗೆ ಪ್ರಾಧಿಕಾರದಿ೦ದ ಸಿಗುವ ಕಾನೂನಿನ  ನೆರವುಗಳ ಬಗ್ಗೆ  ವಿವರವಾಗಿ ತಿಳಿಸಿದರು. ಕಾನೂನು  ಸೇವಾ ಪ್ರಾಧಿಕಾರದ ಸದಸ್ಯ  ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಕಾವೇರಿಯವರು ವಿದ್ಯಾರ್ಥಿಗಳ ಹಕ್ಕು  ಹಾಗೂ ಬಾಲಕಾರ್ಮಿಕ  ಪಧ್ಧತಿಯ ಕುರಿತು ವಿವರಿಸಿದರು.

ಸಮಾರಂಭದ ಅಧ್ಯಕ್ಷರಾದ ಶಿವಾನಂದ  ನಾಯಕ್ ಮಾತನಾಡುತ್ತಾ ನವ್ಯ ಚೇತನ ಟ್ರಸ್ಟ್‌ ನ ಸಾಮಾಜಿಕ  ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಆದಾಯ ತೆರಿಗೆ ನಿವೃತ್ತ ಕಛೇರಿ ಅಧೀಕ್ಷಕರಾದ ಕರುಣಾಕರ ರಾವ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಐರಿನ್ ಮಿನೆಜಸ್ ಮತ್ತು  ಟ್ರಸ್ಟಿ ರಾಜಶ೦ಕರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಲೂಸಿ ಸೋಜಾ ಸ್ವಾಗತಿಸಿ ಶೈಕ್ಷಣಿಕ ವರದಿಯನ್ನು  ನೀಡಿದರು.

ಶಿಕ್ಷಕಿ ಶ್ಯಾಮಲಾ ಕಾರ್ಯಕ್ರಮ  ನಿರೂಪಣೆ ಮಾಡಿ ವ೦ದಿಸಿದರು. ಶಿಕ್ಷಕರಾದ ಲಲಿತಾ, ಸ೦ತೋಷಕುಮಾರ್ ಶೆಟ್ಟಿ, ಪ್ರಕಾಶ್  ಶೆಟ್ಟಿ, ಉಮೇಶ್, ಸುರೇಶ್ ಮತ್ತು ಪ್ರತಿಮಾ ಉಪಸ್ಥಿತರಿದ್ದರು.ವನ ಮಹೋತ್ಸವದ ಅ೦ಗವಾಗಿ ಶಾಲೆಯ ಆವರಣದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು.

Leave a Reply

Your email address will not be published. Required fields are marked *

error: Content is protected !!