ಆರೋಗ್ಯವೇ ಭಾಗ್ಯ… ವಿಶ್ವ ಆರೋಗ್ಯ ದಿನದ ವಿಶೇಷ ಲೇಖನ

ಸಕಲ ಸಂಪತ್ತುಗಳಲ್ಲಿ ಶ್ರೇಷ್ಠ ಸಂಪತ್ತು ಆರೋಗ್ಯ ಸಂಪತ್ತು. ಒಂದು ದೇಶದ ಪ್ರಗತಿ ಅಲ್ಲಿ ನೆಲಸಿರುವ ನಾಗರಿಕರ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (world health organization- WHO) ಪ್ರಕಾರ ಆರೋಗ್ಯವೆಂದರೆ ಅಥವಾ ಆರೋಗ್ಯಕರ ಎಂದರೆ ಯಾವಾಗಲೂ ದೈಹಿಕ ಆರೋಗ್ಯವಲ್ಲ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಸಹ ಅರ್ಥೈಸುತ್ತದೆ. ಜನರ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಅರಿವನ್ನು ಉತ್ತೇಜಿಸಲು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ದಿನವನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ದಿನ- 2022 ಇತಿಹಾಸ: ವಿಶ್ವ ಆರೋಗ್ಯ ಸಂಸ್ಥೆ (WHO) 1948 ರಲ್ಲಿ ಮೊದಲ ವಿಶ್ವ ಆರೋಗ್ಯ ಸಭೆಯನ್ನು ಮಾಡಿತು ಮತ್ತು ವಿಶ್ವ ಆರೋಗ್ಯ ದಿನವನ್ನು ಸ್ಥಾಪಿಸಿತು. ಮೊದಲ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7, 1950 ರಂದು ನಡೆಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ಇದನ್ನು ಆಚರಿಸಲಾಗುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಮತ್ತು ಇತರ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಪಾತ್ರವನ್ನು ವಹಿಸುತ್ತದೆ ಮತ್ತು  ಸಮಕಾಲೀನ ಆರೋಗ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಾರೆ, ಈ ವರ್ಷದ ವಿಶ್ವ ಆರೋಗ್ಯ ದಿನದ 2022 ರ ಥೀಮ್ ‘ನಮ್ಮ ಗ್ರಹ, ನಮ್ಮ ಆರೋಗ್ಯ.’

ಉತ್ತಮ ಆರೋಗ್ಯಕ್ಕೆ 10 ಸಲಹೆಗಳು

1. ಋತು ಅನುಸಾರ ಆಹಾರ ಹಾಗೂ ಹಸಿರು ತರಕಾರಿ, ಹಣ್ಣುಗಳನ್ನು ಹೇರಳವಾಗಿ ಸೇವಿಸಿ.

2. ಸಮತೋಲನ ಆಹಾರ ಸೇವನೆ ಆಹಾರದಲ್ಲಿ ರಾಗಿ, ನವಣೆ, ಸಜ್ಜೆಯಂತಹ ಸಿರಿಧಾನ್ಯಗಳನ್ನು ಹೇರಳವಾಗಿ ಸೇವಿಸಿ.

3. ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪ ಬೆಣ್ಣೆಯನ್ನು ಹೇರಳವಾಗಿ ಸೇವಿಸಿ ಇವು ಕ್ಯಾಲ್ಸಿಯಂನ ಮೂಲಗಳಾಗಿವೆ

4. ಕಡಿಮೆ ಮಸಾಲೆ ಖಾರ ರಹಿತ ಮೀನು ಮೊಟ್ಟೆ ಸೇವಿಸಿ.

5. ಪ್ರತಿನಿತ್ಯ ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ.

6. ಊಟ ಮಾಡುವಾಗ ಮೊಬೈಲ್ ಟಿವಿ ಬಳಸದೆ ನೆಮ್ಮದಿಯಿಂದ ಆಹಾರ ಸೇವಿಸಿ.

7. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ ಕನಿಷ್ಠ 6 ಗಂಟೆ ನಿದ್ರಿಸಿ.

8. ಮನಸನ್ನು  ಶಾಂತಗೊಳಿಸಲು ಯೋಗ ಧ್ಯಾನದಲ್ಲಿ ತೊಡಗಿಕೊಳ್ಳಿ.

9. ಸಾಕಷ್ಟು ನೀರನ್ನು ಕುಡಿಯಿರಿ

10. ಪ್ರತಿದಿನ ಆಹಾರದಲ್ಲಿ ಸಾಕಷ್ಟು ಸೊಪ್ಪು ತರಕಾರಿ ನಟ್ಸ್ ಗಳನ್ನು( ಬಾದಾಮಿ, ವಾಲ್ನಟ್) ಸೇವಿಸಿ.

ಲೇಖಕರು : ಜೆಸಿ ಡಾ ವಿಜಯ್ ನೆಗಳೂರ್ ಅಧ್ಯಕ್ಷರು ಜೆಸಿಐ ಉಡುಪಿ ಸಿಟಿ, ಖ್ಯಾತ ಆಯುರ್ವೇದ ತಜ್ಞ ವೈದ್ಯರು ಪ್ರಥಮ ಕ್ಲಿನಿಕ್ ಕೆಮ್ಮಣ್ಣು ಉಡುಪಿ: 7892618108

Leave a Reply

Your email address will not be published. Required fields are marked *

error: Content is protected !!