‘ಆತ್ಮನಿರ್ಭರ ಭಾರತ’ದ ಮಹತ್ತರ ಮೈಲಿಗಲ್ಲು- ₹30.49 ಲಕ್ಷ ಕೋಟಿ ಮೌಲ್ಯದ ಸರಕು ರಫ್ತು

ನವದೆಹಲಿ ಮಾ.23: ದೇಶದ ‘ಆತ್ಮನಿರ್ಭರ ಭಾರತ’ ಪ್ರಯಾಣದಲ್ಲಿ ಭಾರತ ಮಹತ್ತರವಾದ ಮೈಲಿಗಲ್ಲು ಸಾಧಿಸಿದೆ. 

ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಹೊರ ದೇಶಗಳಿಗೆ 400 ಬಿಲಿಯನ್‌ ಡಾಲರ್‌ (ಅಂದಾಜು ₹30.49 ಲಕ್ಷ ಕೋಟಿ ) ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ನಿತ್ಯ ಸರಾಸರಿ ಒಂದು ಬಿಲಿಯನ್‌ ಡಾಲರ್‌ ಮೌಲ್ಯದ ಹಾಗೂ ಪ್ರತಿ ತಿಂಗಳು ಸರಾಸರಿ 33 ಬಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಮತ್ತು ಎಂಜಿನಿಯರಿಂಗ್‌ ಸರಕು, ಲೆದರ್‌, ಕಾಫಿ, ಪ್ಲಾಸ್ಟಿಕ್‌, ಸಿದ್ಧ ಉಡುಪು ಮತ್ತು ವಸ್ತ್ರಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳು, ಮೀನು ಸೇರಿದಂತೆ ಸಮುದ್ರದ ಉತ್ಪನ್ನಗಳು ಹಾಗೂ ತಂಬಾಕು ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು 400 ಬಿಲಿಯನ್‌ ಡಾಲರ್‌ ಸರಕು ರಫ್ತು ಗುರಿಯನ್ನು ಇದೇ ಮೊದಲ ಬಾರಿಗೆ ತಲುಪಿದೆ.. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು ಹಾಗೂ ರಫ್ತುದಾರರನ್ನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷ ಮುಕ್ತಾಯಕ್ಕೆ 9 ದಿನಗಳು ಉಳಿದಿರುವಂತೆ ಸರಕು ರಫ್ತು ಪ್ರಮಾಣವು ಈವರೆಗಿನ ದಾಖಲೆಯ ಮಟ್ಟ ತಲುಪಿದೆ. 2022ರ ಮಾರ್ಚ್‌ ವರೆಗೂ ರಫ್ತು ಮಾಡಲಾಗಿರುವ ಸರಕು ಮೌಲ್ಯವು ಶೇಕಡ 37ರಷ್ಟು ಹೆಚ್ಚಳ ಕಂಡಿದ್ದು, 400 ಬಿಲಿಯನ್‌ ಡಾಲರ್‌ ತಲುಪಿದೆ. 2020–21ನೇ ಸಾಲಿನಲ್ಲಿ 292 ಬಿಲಿಯನ್‌ ಡಾಲರ್‌ ಮೊತ್ತದ ಸರಕು ರಫ್ತು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!