| ಪಂಚ ರಾಜ್ಯ ಚುನಾವಣಾ ಫಲಿತಾಂಶ ಹೊರ ಬಿದ್ದಿದು ಬಹು ನಿರೀಕ್ಷಿತ ಫಲಿತಾಂಶವೆಂದೇ ಬಿಂಬಿಸಲಾಗಿದೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಅಂತೂ ಹೆಚ್ಚು ನಿರೀಕ್ಷಿತ ಫಲಿತಾಂಶ. ಬಿಜೆಪಿ 2ನೇ ಬಾರಿ ಸ್ವಷ್ಟ ಬಹುಮತದೊಂದಿಗೆ ಯೇೂಗಿ ಆದಿತ್ಯನಾಥ ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುತ್ತಿರುವುದು ಉತ್ತರ ಪ್ರದೇಶದಲ್ಲಿ ಒಂದು ಹೊಸ ದಾಖಲೆಯೇ ಸರಿ.
ಇದುವರೆಗೆ ಯಾರು ಕೂಡಾ ಸತತವಾಗಿ ಎರಡನೇಯ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಉದಾಹರಣೆ ಉ.ಪ್ರದೇಶದಲ್ಲಿ ಇರಲಿಲ್ಲ. ಯೇೂಗಿಯ ವಿರುದ್ಧ ವಿಪಕ್ಷಗಳು ಸಾಕಷ್ಟು ಟೀಕಾಪ್ರಹಾರ ಮಾಡಿದ್ದರೂ ಕೂಡಾ ಮತದಾರರು ಯೇೂಗಿಯನ್ನು ಮತ್ತೆ ಯಾಕೆ ಬೆಂಬಲಿಸಿದ್ದರು ಅನ್ನುವುದು ಅಷ್ಟೇ ಮುಖ್ಯ. ಅಂದ್ರೆ ಯೇೂಗಿ ಸರಕಾರದ ವಿರುದ್ಧ ಆಡಳಿತ ವಿರೇೂಧಿ ಅಲೆ ಇರಲಿಲ್ಲ ಅನ್ನುವುದು ಈ ಚುನಾವಣಾ ಫಲಿತಾಂಶದ ಇನ್ನೊಂದು ಪ್ರಮುಖ ಅಂಶ. ಯೇೂಗಿ ಓವ೯ ಪ್ರಾಮಾಣಿಕ ಮಾತ್ರವಲ್ಲ ತನ್ನ ಬಂಧುಗಳನ್ನು ತನ್ನ ಅಧಿಕಾರ ಅವಧಿಯಲ್ಲಿ ಹತ್ತಿರ ಕೂಡಾ ಸುಳಿಯಲು ಬಿಡಲಿಲ್ಲ ಹಾಗಾಗಿ ಮತದಾರರು ಎಂತಹ ನಾಯಕರು ನಮಗೆ ಬೇಕಾಗಿದೆ ಅನ್ನುವ ಸಂದೇಶವನ್ನು ಈ ಫಲಿತಾಂಶದಲ್ಲಿ ಪ್ರಕಟ ಪಡಿಸಿದ್ದಾರೆ. ಮಾತ್ರವಲ್ಲ ಜಾತಿ ಮೀರಿದ ರಾಜಕಾರಣಕ್ಕೆ ಉ.ಪ್ರದೇಶ ಇಂದು ಸಾಕ್ಷಿಯಾಗುತ್ತಿದೆ ಅನ್ನುವುದುಾ ಅಷ್ಟೇ ಸತ್ಯ. ರಾಮ ಮಂದಿರದ ಮೂಲಕ ಹಿಂದುತ್ವ ಅಲೆ ಪ್ರಬಲವಾಗಿ ಬೀಸಿದೆ ಅನ್ನುವುದು ಕೂಡಾ ಅಷ್ಟೇ ಖಚಿತ. ರೆೈತ ಚಳುವಳಿ ಹಿಜಾಬ್ ಪ್ರಕರಣಗಳು ಬೆಲೆ ಏರಿಕೆ, ಕೊರೊನ ಇತ್ಯಾದಿ ವಿಷಯಗಳು ಉ.ಪ್ರದೇಶ ಚುನಾವಣೆಯ ಫಲಿತಾಂಶಕ್ಕೆ ಅಡ್ಡಿ ಬರಲೇ ಇಲ್ಲ ಅನ್ನುವುದು ಈ ಫಲಿತಾಂಶ ಸ್ವಷ್ಟಪಡಿಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೇ ನೇರ ಚುನಾವಣೆಯೇ ಆಗಿತ್ತು ಅನ್ನುವುದು ಈಗಿನ ಫಲಿತಾಂಶದ ಚಿತ್ರಣ ಸ್ವಷ್ಟ ಪಡಿಸಿದೆ. ಜಾತಿಯನ್ನೆ ನಂಬಿಕೊಂಡು ಬಂದ ಮಾಯವತಿ ಬಿ.ಎಸ್.ಪಿ.ಮೂರನೇ ಸ್ಥಾನದಲ್ಲಿ ತೃಪ್ತಿ ಪಡೆದದ್ದು ಇನ್ನೊಂದು ವಿಶೇಷ. ಮಾತ್ರವಲ್ಲ ಸ್ವಾತಂತ್ರ್ಯೇೂತ್ತರದ ಹಲವು ವರುಷಗಳ ಕಾಲ ಈ ರಾಜ್ಯವನ್ನು ಆಳಿದ ಹಲವು ಮುಖ್ಯಮಂತ್ರಿಗಳನ್ನು ಪ್ರಧಾನಮಂತ್ರಿಗಳನ್ನು ನೀಡುವುದರ ಮೂಲಕ ರಾಷ್ಟೀಯ ಪಕ್ಷ ಅನ್ನುವ ಗೌರವ ಪಡೆದು ಕೊಂಡ ಕಾಂಗ್ರೆಸ್ (ಐ)ಹೇಳ ಹೆಸರಿಲ್ಲದ ತರದಲ್ಲಿ403 ಸ್ಥಾನದಲ್ಲಿ ಕೇವಲ 2 ಸೀಟ್ ಪಡೆಯುವುದರೊಂದಿಗೆ ಸ್ವಯಂಕೃತ ತಪ್ಪಿನಿಂದಾಗಿ ಅಳಸಿ ಹೇೂಗುವುತ್ತಿರುವುದು ಕೂಡಾಈ ಚುನಾವಣಾ ಫಲಿತಾಂಶದ ಇನ್ನೊಂದು ದಿಕ್ಸೂಚಿ ಅಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಉ.ಪ್ರ.ಮುಖ್ಯಮಂತ್ರಿ ಯೇೂಗಿ ಆದಿತ್ಯನಾಥ ರಾಷ್ಟ್ರ ಮುಂದಿನ ಪ್ರಧಾನಿ ಅನ್ನುವ ಮಟ್ಟಿಗೆ ಈ ಫಲಿತಾಂಶ ಭವಿಷ್ಯ ಬರೆಯಲ್ಲಿದೆ ಅನ್ನುವುದು ಕೂಡಾ ವಿಶ್ಲೇಷಕರ ಮಾತು.
ಪಂಜಾಬ್ನಲ್ಲಿ ಆಪ್”ಪ್ರಯೇೂಗ ಯಶಸ್ವಿ: ಪಂಚ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ವಿಶೇಷವಾಗಿ ಗಮನ ಹರಿಸಬೇಕಾದ ಫಲಿತಾಂಶವೆಂದರೆ ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದ ಅದ್ಬುತ ಸಾಧನೆ. ಒಟ್ಟು 117ರಲ್ಲಿ 92 ಸ್ಥಾನಗಳನ್ನು ಗೆಲುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ನಲ್ಲಿ ಗತಿಕಾಣಿಸಿ ಬಿಟ್ಟಿದೆ. ಡಿಲ್ಲಿಯ ನಂತರ ಪಂಜಾಬ್ಗೆ ಲಗ್ಗೆ ಹಾಕಿರುವ ಆಪ್ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಪಯಾ೯ಯ ಪಕ್ಷವಾಗಿ ಜನ ಸ್ವೀಕರಿಸುವ ಸಾಧ್ಯತೆ ನಿಚ್ಚಳವಾಗಿವಾಗಿ ಕಾಣುತ್ತಿದೆ. ಕಾಂಗ್ರೆಸ್ ಸೇೂತ ನೆಲದಲ್ಲಿ ಆಪ್ ಪಕ್ಷದ ಬೀಜ ಮೊಳಕೆ ಕಾಣುತ್ತಿದೆ ಅಂದ್ರೆ ಜನರಿಗೆ ಬಿಜೆಪಿಗೆ ಪಯಾ೯ಯ ಪಕ್ಷ ಒಂದು ಅಗತ್ಯವಿದೆ ಅನ್ನುವ ಸಂದೇಶ ಪಂಜಾಬ್ನಲ್ಲಿ ಹುಟ್ಟಿ ಬಂದಂತಿದೆ.
ಇದು ನಿಧಾನವಾಗಿ ಛತ್ತೀಸ್ಘಡ್ ಕಡೆಗೂ ವಿಸ್ತರಣೆ ಆದರೂ ಆಶ್ಚರ್ಯವಿಲ್ಲ. ಇನ್ನೂ ಉಳಿದ ರಾಜ್ಯಗಳಾದ ಉತ್ತರಖಂಡ, ಮಣಿಪುರ ಹಾಗೂ ಗೇೂವಾ ಈ ಚಿಕ್ಕ ರಾಜ್ಯಗಳಾದರೂ ಕೂಡಾ ಅಲ್ಲಿ ಸ್ಥಿರ ಸರ್ಕಾರ ಬೇಕಾಗಿದೆ ಅನ್ನುವ ಸಂದೇಶ ಈ ಮೂರು ಚುನಾವಣಾ ಫಲಿತಾಂಶದಲ್ಲಿ ತೇೂರಿಸಿ ಕೊಟ್ಟಿದ್ದಾನೆ ಪ್ರಬುದ್ಧ ಮತದಾರ. ಸರ್ಕಾರ ನಡೆಸಲು ಎಷ್ಟು ಬಹುಮತ ಬೇಕಾಗಿದೆಯೊ ಅಷ್ಟನೇ ನೀಡಿ ಅತಂತ್ರ ಸರ್ಕಾರಕ್ಕೆ ತೆರೆ ಎಳೆಯುವ ಫಲಿತಾಂಶ ಇದ್ದಾಗಿದೆ ಅನ್ನುವುದು ಸಂತಸದ ಸುದ್ದಿಯೂ ಹೌದು.
ಪಂಚ ರಾಜ್ಯ ಚುನಾವಣಾ ಫಲಿತಾಂಶದ ಸಂದೇಶ 1. ಚುನಾವಣಾ ಫಲಿತಾಂಶ ಪಕ್ಷಗಳ ಕೆೈಯಲ್ಲಿ ಇಲ್ಲ ಬದಲಾಗಿ ಪ್ರಬುದ್ಧ ಮತದಾರನೆ ಅಂತಿಮ ನಿಧಾ೯ರ ತೆಗೆದು ಕೊಳ್ಳುತ್ತಾನೆ ಅನ್ನುವ ಖಡಕ್ ಸಂದೇಶ ಈ ಚುನಾವಣೆಯಲ್ಲಿ ಹೊರ ಬಿದ್ದಿದೆ. 2. ಚುನಾವಣಾ ಎದುರಿಸುವ ದೃಷ್ಟಿಕೇೂನ ಬದಲಾಯಿಸಿಕೊಳ್ಳದಿದ್ದರೆ ರಾಜಕೀಯ ಪಕ್ಷಗಳಿಗೆ ಉಳಿಗಾಲವಿಲ್ಲ ಅನ್ನುವುದು ಸ್ವಷ್ಟವಾಗಿದೆ. ಇಲ್ಲಿ ಆಪ್ ಪಕ್ಷ ಪಂಜಾಬ್ನಲ್ಲಿ ಹೂಡಿದ ರಣತಂತ್ರ ಉತ್ತಮ ನಿದಶ೯ನವಾಗಿದೆ. 3. ಜಾತ್ಯತೀತ ಹೆಸರಿನಲ್ಲಿ ಹಿಂದುತ್ವ ಮರೆತರೆ ಬಹು ಸಂಖ್ಯಾತ ಮತದಾರ ಎಚ್ಚರಿಕೆಯ ಘಂಟೆ ಯನ್ನು ಬಾರಿಸಿ ಬಿಟ್ಟಿದ್ದಾನೆ. 4. ಕಾಂಗ್ರೆಸ್ಗೆ ಪಯಾ೯ಯವಾಗಿ ಪ್ರಬಲವಾದ ಪಕ್ಷ ಮತ್ತು ನಾಯಕತ್ವದ ಅನಿವಾರ್ಯತೆ ಇದೆ ಅನ್ನುವುದು ಪಂಜಾಬ್ ನೆಲದಲ್ಲಿ ಮೂಡಿ ಬಂದಿದೆ. ಪಕ್ಷಗಳ ಒಳ ಜಗಳ ವಂಶವಾಹಿನಿ ನಾಯಕತ್ವ ಜನ ಬಯಸುದಿಲ್ಲ. ಬದಲಾಗಿ ಪ್ರಾಮಾಣಿಕ ಸಮಥ೯ ನಾಯಕತ್ವ ರಾಜ್ಯ ಮತ್ತು ರಾಷ್ಟ್ರಕ್ಕೆ ಅನಿವಾರ್ಯತೆ ಇದೆ ಅನ್ನುವುದು ಅಷ್ಟೇ ಸ್ವಷ್ಟ. 5. ಉತ್ತರ ಪ್ರದೇಶದಿಂದಲೇ ಇನ್ನೊಬ್ಬ ರಾಷ್ಟ್ರ ನಾಯಕನನ್ನು ತಯಾರು ಮಾಡುವ ಭವಿಷ್ಯದ ಫಲಿತಾಂಶ ದಿಂದ ಹೊರ ಬಿದ್ದಿದೆ. 6. ರಾಷ್ಟ್ರೀಯ ಪಕ್ಷ ಅನ್ನಿಸಿಕೊಂಡ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿ ಕೊಳ್ಳ ಬೇಕಾದರೆ ನಾಯಕತ್ವ ವಾಸ್ತವಿಕ ಸಿದ್ಧಾಂತ, ಮಾತಿನ ಧಾಟಿಯಲ್ಲಿ ಸಮಗ್ರವಾಗಿ ಬದಲಾಯಿಸಿ ಕೊಳ್ಳಬೇಕಾದ ಕಾಲ ಕೂಡಿ ಬಂದಿರುವುದಂತೂ ಪಕ್ಷದ ಹಿತದೃಷ್ಟಿಯಿಂದ ತೀರ ಅಗತ್ಯವಿದೆ. ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ | |