ಯುದ್ಧದಲ್ಲಿ ರಷ್ಯಾದ 5,300 ಸೈನಿಕರ ಸಾವು- ಉಕ್ರೇನ್ ರಕ್ಷಣಾ ಸಚಿವಾಲಯ
ಕೀವ್: ಕಳೆದ ಐದು ದಿನಗಳಿಂದ ರಷ್ಯಾ ಉಕ್ರೇನ್ ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಚಾರಣೆಯಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಉಕ್ರೇನ್ ನೊಂದಿಗಿನ ಯುದ್ಧದಲ್ಲಿ 5,300 ರಷ್ಯಾದ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿ ನೀಡಿದೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಸಾವು- ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ರಷ್ಯಾದ ಆಕ್ರಮಣ ಸಮಯದಲ್ಲಿ 14 ಮಕ್ಕಳು ಸೇರಿದಂತೆ 325 ಉಕ್ರೇನ್ ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ. ಭಾನುವಾರದಂದು ಉಕ್ರೇನ್ ಸಶಸ್ತ್ರ ಪಡೆಗಳಲ್ಲಿ ಆದ ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತನ್ನ ಪಡೆಗಳು ಉಕ್ರೇನಿಯನ್ ಮಿಲಿಟರಿ ಸೌಕರ್ಯಗಳನ್ನು ಮಾತ್ರ ಗುರಿಯಾಗಿಸಿವೆ ಕೊಂಡಿವೆ ಎಂದು ರಷ್ಯಾ ಹೇಳಿಕೊಂಡಿದೆ.
ಉಕ್ರೇನ್ ನ ಸಶಸ್ತ್ರ ಪಡೆಗಳ ಜನರಲ್ ಸ್ಯಾಟ್ಫ್ ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ರಷ್ಯಾ ಅನುಭವಿಸಿದ ಸಾವು ನೋವುಗಳ ಧೀರ್ಘ ಪಟ್ಟಿಯನ್ನು ಅಪ್ ಲೋಡ್ ಮಾಡಿದ್ದಾರೆ. ವಿಮಾನಗಳು-29, ಹೆಲಿಕಾಪ್ಟರ್ ಗಳು-29, ಟ್ಯಾಂಕರ್ ಗಳು -191, ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹನಗಳು -816, ಕ್ಯಾನನ್-74, ಕ್ಷಿಪಣಿ ವ್ಯವಸ್ಥೆ-1, ಎಂಎಲ್ ಆರ್ ಎಸ್ ಬಿಎಂ-21 ವಾಹನಗಳು -291 ಇಂಧನ ಟ್ಯಾಂಕ್ ಗಳು-60, ಹಡಗು, ದೋಣಿಗಳು-2, ವಿಮಾನ ವಿರೋಧಿ ಯುದ್ಧ ವ್ಯವಸ್ಥೆ-5 ಸಿಬ್ಬಂದಿ ಸುಮಾರು 5,300 ಸೈನಿಕರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.