ಹೊಸದಿಲ್ಲಿ :ಮುಂದಿನ ಆದೇಶದವರೆಗೆ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ನಿಷೇಧ ವಿಸ್ತರಣೆ

ಹೊಸದಿಲ್ಲಿ ಫೆ.28 : ಮುಂದಿನ ಆದೇಶದವರೆಗೆ ದೇಶದಲ್ಲಿ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

ಈ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸುತ್ತೋಲೆ ಹೊರಡಿಸಿ ಮಾಹಿತಿ ನೀಡಿದ್ದು, “ಮುಂದಿನ ಆದೇಶದವರೆಗೆ ಭಾರತಕ್ಕೆ ಅಥವಾ ಭಾರತದಿಂದ ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತುಗೊಳಿಸುವಿಕೆಯನ್ನು ವಿಸ್ತರಿಸಲು ಸಮರ್ಥ ಪ್ರಾಧಿಕಾರವು ನಿರ್ಧರಿಸಿದೆ. ಈ ನಿರ್ಬಂಧವು ಅಂತರರಾಷ್ಟ್ರೀಯ ಎಲ್ಲಾ-ಸರಕು ಕಾರ್ಯಾಚರಣೆಗಳು ಮತ್ತು ನಿರ್ದಿಷ್ಟವಾಗಿ ಡಿಜಿಸಿಎ ಯಿಂದ ಅನುಮೋದಿಸಲಾದ ವಿಮಾನಗಳಿಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿದೆ.

ಈ ಹಿಂದೆ ಜನವರಿ 19 ರಂದು ಈ ನಿಷೇಧವನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಲಾಗಿತ್ತು. ಅದಕ್ಕೂ ಮೊದಲು ಕೊರೋನವೈರಸ್ ಏಕಾಏಕಿ ಏರಿಕೆ ಕಂಡ ಕಾರಣ 2020ರ ಮಾ.23 ರಿಂದ ಭಾರತದಲ್ಲಿ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಹೊರತಾಗಿ ಜುಲೈ 2020 ರಿಂದ ಭಾರತ ಹಾಗೂ ಸುಮಾರು 45 ದೇಶಗಳ ನಡುವೆ ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!