ಕನಸಿನಲ್ಲಿ ಬಂದು ಪದೇ ಪದೇ ಅತ್ಯಾಚಾರ ಮಾಡುತ್ತಿದ್ದಾನೆ ಮಹಿಳೆ ಪೊಲೀಸ್ ಠಾಣೆಗೆ ದೂರು
December 24, 2021
ಬಿಹಾರ ಡಿ.24: ಕನಸಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಪದೇ ಪದೇ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿರುವ ಅಸಾಮಾನ್ಯ ಘಟನೆಯೊಂದು ಬಿಹಾರದ ಔರಂಗಾಬಾದ್ ನಲ್ಲಿ ನಡೆದಿದೆ.
ಈ ಕುರಿತಾಗಿ ಮಹಿಳೆ ಔರಂಗಾಬಾದ್ನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಹಾಗೂ ಮಹಿಳೆ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ಅಂಜನಿ ಕುಮಾರ್ ಅವರಿಗೆ ನೀಡಿದ ದೂರಿನಲ್ಲಿ, ಜನವರಿಯಲ್ಲಿ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ತನ್ನ ಮಗನ ಆರೈಕೆಗಾಗಿ(ಚಿಕಿತ್ಸೆ)ಔರಂಗಾಬಾದ್ನ ಕಾಳಿ ಬಾರಿ ದೇವಸ್ಥಾನದಲ್ಲಿ ಚತುರ್ವೇದಿ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದರು.ಈ ವೇಳೆ ಚತುರ್ವೇದಿ ಅವರು "ಮಂತ್ರ"ವನ್ನು ಪಠಿಸಬೇಕು ಮತ್ತು ತನ್ನ ಮಗನ ಶೀಘ್ರ ಚೇತರಿಸಿಕೊಳ್ಳಲು ಕೆಲವು ಆಚರಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು ಎಂಬುದಾಗಿ ಹೇಳಿದ್ದರು. ಈ ವಿಚಾರವಾಗಿ ಮಹಿಳೆಯ ಮಾತಿನ ಆತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ಮಹಿಳೆ ಹೇಳಿದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಿಸುತ್ತಾರೆ ಹಾಗೂ ಆತ ಈ ವೇಳೆ ಮಹಿಳೆ ಒಮ್ಮೆ ದೇವಸ್ಥಾನದಲ್ಲಿ ತನ್ನನ್ನು ಭೇಟಿಯಾಗಿದ್ದಳು ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಚಾರವಾಗಿ ಪೊಲೀಸರು ವಿಚಾರಣೆಗೆ ಒಳಪಡಿಸಿದ ವ್ಯಕ್ತಿಯನ್ನು ಬಳಿಕ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಗೊಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಔರಂಗಾಬಾದ್ ಉಪ ಪೊಲೀಸ್ ವರಿಷ್ಠಾಧಿಕಾರಿ(ಪ್ರಧಾನ ಕಚೇರಿ)ಲಲಿತ್ ನಾರಾಯಣ ಪಾಂಡೆ ಅವರು ಮಾಹಿತಿ ನೀಡಿ, ಪ್ರಾಥಮಿಕವಾಗಿ ಮಹಿಳೆಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆಂದು ತೋರುತ್ತದೆ ಎಂದು ತಿಳಿಸಿದ್ದಾರೆ.