ಜನವರಿ ಮೊದಲ ವಾರದಲ್ಲಿ ಯುಎಇಗೆ ಪ್ರಧಾನಿ ಮೋದಿ ಭೇಟಿ- ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ ಡಿ.27: ವಿದೇಶದಲ್ಲಿ ಉದ್ಯೋಗ ಅರಸಿ ಹೋಗಿರುವವರಿಗೆ ಸದ್ಯದಲ್ಲೇ ಸಿಹಿ ಸುದ್ಧಿ ಸಿಗಲಿದೆ ಎನ್ನಲಾಗುತ್ತಿದೆ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ಮೊದಲ ವಾರದಲ್ಲಿ ಯುಎಇಗೆ ಭೇಟಿ ನೀಡಲಿದ್ದು, ಈ ವೇಳೆ ಮಹತ್ವದ ಒಪ್ಪಂದಗಳು ನಡೆಯಲಿದ್ದು, ಭಾರತದಿಂದ ಉದ್ಯೋಗಕ್ಕಾಗಿ ಯುಎಇಗೆ ತೆರಳುವ ವ್ಯಕ್ತಿಗಳಿಗೆ ಅನುಕೂಲವಾಗುವದಲ್ಲಿವೆ ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆ ನಡೆದಿದ್ದು, ಒಪ್ಪಂದ ಬಹುತೇಕ ಅಂತಿಮಗೊಂಡಿದ್ದು, ಪ್ರಧಾನಿ ಭೇಟಿ ವೇಳೆ ಈ ಒಪ್ಪಂದ ಅಧಿಕೃತವಾಗಲಿದೆ.

ಭಾರತದ ವೃತ್ತಿಪರರು ಹಾಗೂ ಕಾರ್ಮಿಕರು ಯುಎಇಗೆ ತೆರಳಲು, ಅಲ್ಲಿ ಕೆಲಸ ಮಾಡಲು ಈಗಿರುವ ನಿಯಮಗಳನ್ನು ಸರಳಗೊಳಿಸಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಯುಎಇನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಪ್ಪಂದದಿಂದ ಅವರಿಗೂ ಅನುಕೂಲ ಆಗಲಿದೆ. ಉಭಯ ದೇಶಗಳ ನಡುವಿನ ಪ್ರಯಾಣ ಇನ್ನಷ್ಟು ಸುಗಮಗೊಳ್ಳಲಿದೆ. ಗಲ್ಫ್ ನಲ್ಲಿರುವ ಭಾರತೀಯ ಅಥವಾ ವಿದೇಶಿ ಕಂಪನಿಗಳು ಭಾರತದ ವೃತ್ತಿಪರರು, ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಈಗಿರುವ ಅರ್ಹತಾ ಪರೀಕ್ಷೆಯನ್ನೂ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಭಾರತದ ಹಲವಾರು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲು ಯುಎಇ ಉತ್ಸುಕವಾಗಿದೆ. ಹೊಸ ಒಪ್ಪಂದದಿಂದ ಮೂಲಸೌಕರ್ಯ ಸಹಿತ ಹಲವೆಡೆ ಹೂಡಿಕೆ ಸಾಧ್ಯವಾಗಲಿದೆ. ಈಗಿರುವ ಹಲವಾರು ನಿಯಮಗಳನ್ನೂ ಸರಳಗೊಳಿಸುವ ಸಾಧ್ಯತೆ ಇದೆ. ಇದರ ಜತೆಗೆ ಯುಎಇನಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲು ಭಾರತ ಒಪ್ಪಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!