ಚಿನ್ನಾರಿ ಮುತ್ತ ಖ್ಯಾತಿಯ ಕನ್ನಡದ ಹಿರಿಯ ನಟಿ ಬಿ. ಶಾಂತಮ್ಮ ವಿಧಿವಶ

ಮೈಸೂರು: ಚಿನ್ನಾರಿ ಮುತ್ತ, ಚಂದವಳ್ಳಿ ತೋಟ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಬಿ. ಶಾಂತಮ್ಮ ವಿಧಿವಶರಾಗಿದ್ದಾರೆ. 

95 ವರ್ಷದ ಬಿ. ಶಾಂತಮ್ಮ ಅವರು ಸಂಜೆ 5.45ರ ಸುಮಾರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 

ನಟಸಾರ್ವಭೌಮ ಡಾ. ರಾಜಕುಮಾರ್ ಸೇರಿದಂತೆ ಹಲವು ಖ್ಯಾತ ನಟರ ಚಿತ್ರಗಳಲ್ಲಿ ಶಾಂತಮ್ಮ ಅವರು ಅಭಿನಯಿಸಿದ್ದರು. 

ಹಿರಿಯ ನಟ ದೊಡ್ಡಣ್ಣ ಅವರು ಶಾಂತಮ್ಮ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಹಿರಿಯ ನಟಿ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ

Leave a Reply

Your email address will not be published. Required fields are marked *

error: Content is protected !!