ಸದ್ಯಕ್ಕೆ ಶಾಲೆ ಆರಂಭಿಸುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ: ಸಚಿವ ಎಸ್.ಸುರೇಶ್

ಬೆಂಗಳೂರು: ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ,ಬೇರಾವ ಅನವಶ್ಯಕ ಆತಂಕ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಪೇಕ್ಷೆಯಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ ನಲ್ಲಿ ಶಾಲೆಗಳನ್ನು ತೆರೆಯುತ್ತೇವೆಂದು ಸರ್ಕಾರವು ಅಭಿಪ್ರಾಯ ವ್ಯಕ್ತಪಡಿಸಿದೆಯೆಂದು ವರದಿಯಾಗಿರುವುದು ಸರ್ಕಾರದ ನಿರ್ಣಯವಾಗಿರುವುದಿಲ್ಲ. ನಮ್ಮ ಅಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಿದಾಗ ವ್ಯಕ್ತಪಡಿಸಿರಬಹುದಾದ ಸಾಮಾನ್ಯ ಅಭಿಪ್ರಾಯವನ್ನು ಈ ರೀತಿ ಪ್ರತಿಬಿಂಬಿಸಲಾಗಿದೆಯಷ್ಟೆ ಎಂದಿದ್ದಾರೆ.

ಕೊರೋನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು‌ ಬೇರೆಯಿದ್ದು,ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ‌ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ.ಬೇರಾವ ಅನವಶ್ಯಕ ಆತಂಕ ಬೇಡ ಎಂದು ಅವರು  ಸ್ಪಷ್ಟ ಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!