ಲಾಕ್ ಡೌನ್ ಮುಂದುವರಿಸುವಂತೆ ಸಚಿವರು, ಆರೋಗ್ಯ ತಜ್ಞರ ಪಟ್ಟು: ಸಿಎಂ ನಿರಾಕರಣೆ

ಬೆಂಗಳೂರು: ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಘೋಷಿಸಿದ್ದ ಒಂದು ವಾರದ ಲಾಕ್ ಡೌನ್ ಜುಲೈ 22 ಕ್ಕೆ ಅಂತ್ಯವಾಗಲಿದೆ,  ಆದರೆ ಸದ್ಯ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆ ಲಾಕ್ ಡೌನ್ ವಿಸ್ತರಣೆಯಾಗುತ್ತದೋ ಇಲ್ಲವೋ ಎಂಬುದು.

ಆದರೆ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ, ಇದೇ ವೇಳೆ ಆರೋಗ್ಯ ತಜ್ಞರು ಮತ್ತು ಸಚಿವ ಸಂಪುಟದ ಇಬ್ಬರು ಪ್ರಮುಖ ಮಂತ್ರಿಗಳು ಲಾಕ್ ಡೌನ್ ವಿಸ್ತರಸುವಂತೆ ಸಲಹೆ ನೀಡಿದ್ದಾರೆ, ಕೊರೋನಾ ಸರಣಿ ಬ್ರೇಕ್ ಮಾಡಲು ಕನಿಷ್ಠ 14 ದಿನ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದ್ದಾರೆ.

ವಿಶೇಷವೆಂದರೆ, ಬೆಂಗಳೂರಿನ ಎಂಟು ಬಿಬಿಎಂಪಿ ವಲಯಗಳ ಉಸ್ತುವಾರಿ ಸಚಿವರು ಬುಧವಾರದಿಂದ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ತಿಳಿಸಿದ್ದಾರೆ. ಯಾವುದೇ ಲಾಕ್ ಡೌನ್ ಇರುವುದಿಲ್ಲ,  ಲಾಕ್ ಡೌನ್ ಮುಂದುವರಿಸಿದರೇ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಸಿಎಂ ಯಡಿಯೂರಪ್ಪ ಅವರ ನಿರ್ಧಾರವೂ ಕೂಡ ಇದೇ ಆಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಆದರೆ ಸಚಿವರುಗಳಾದ ಶ್ರೀರಾಮುಲು ಮತ್ತು ಕೆ ಸುಧಾಕರ್ ಮತ್ತೊಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಈ ಪ್ರಸ್ತಾವನೆಗೆ ಆರೋಗ್ಯ ಇಲಾಖೆ ಕೂಡ ಲಾಕ್ ಡೌನ್ ವಿಸ್ತರಿಸುವಂತೆ ತಿಳಿಸಿದೆ. ಸರಪಳಿಯನ್ನು ಮುರಿಯಲು 14 ದಿನಗಳವರೆಗೆ ಲಾಕ್‌ಡೌನ್ ಜಾರಿಗೆ ತರಬೇಕು ಎಂದು ಸಿಎಂಗೆ ತಿಳಿಸಲಾಯಿತು, ಮನೆ-ಮನೆಗೆ ಸಮೀಕ್ಷೆ ನಡೆಸಲು ಇದು ವಾರ್ಡ್ ಸಮಿತಿಗಳಿಗೆ  ಸಮಯವನ್ನು ನೀಡುತ್ತದೆ, ಒಂದು ವಾರದ ಲಾಕ್ ಡೌನ್ ನಿಂದ ಯಾವುದೇ ಫಲಿತಾಂಶ ದೊರೆಯುವುದಿಲ್ಲ ಎಂದು ಕೆಲವರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಯಾವುದೇ ಕಾರಣಕ್ಕೂ ಲಾಕ್ ಡೌನ್ ವಿಸ್ತರಣೆಯಾಗುವುದಿಲ್ಲ, ಲಾಕ್‌ಡೌನ್ ಅನ್ನು ವಿಸ್ತರಿಸುವಲ್ಲಿ ಯಾವುದೇ ಅರ್ಥವಿಲ್ಲ ಏಕೆಂದರೆ ಜನರಿಗೂ ಲಾಕ್ ಡೌನ್ ಬೇಕಿಲ್ಲ, ರಾತ್ರಿಯವರೆಗೂ ಆರ್ಥಿಕ ಚಟುವಟಿಕೆಗಳು ನಡೆಯುತ್ತವೆ ಮತ್ತು ಆ ಸ್ಥಳಗಳನ್ನು ಮುಚ್ಚಲು ಪೊಲೀಸರಿಗೆ ಕಷ್ಟವಾಗುತ್ತದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!