ಉಡುಪಿ: ಡಿಡಿಪಿಐ ಕಚೇರಿಯಲ್ಲಿ‌‌ ಶುದ್ಧ ಕನ್ನಡ ಮಾತನಾಡುವ ಪ್ರತಿಜ್ಞಾ ಸ್ವೀಕಾರ

ಉಡುಪಿ ನ.1(ಉಡುಪಿ ಟೈಮ್ಸ್ ವರದಿ): ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳು‌ ಮತ್ತು ಸಿಬ್ಬಂದಿಯವರು ಸೇರಿ ನಾಡದೇವಿ ತಾಯಿ ಭುವನೇಶ್ವರಿಗೆ ಪೂಜೆಯನ್ನು ಸಲ್ಲಿಸಿ‌‌ದರು.

ಈ ವೇಳೆ ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿ ವ್ಯಾಸಂಗ‌ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು‌ ಪಾಠ ಬೋಧನೆ‌ ಮಾಡುತ್ತಿರುವ ಜಿಲ್ಲೆಯ ಎಲ್ಲಾ ಶಿಕ್ಷಕರು  ಉತ್ತಮವಾಗಿ  ಶಾಲೆಯಲ್ಲಿ, ಮನೆಯಲ್ಲಿ ಶುದ್ದ ಕನ್ನಡವನ್ನು ಮಾತನಾಡುವಂತೆ ಶಿಕ್ಷಣ ಇಲಾಖೆಯ ಎಲ್ಲ ಮೇಲ್ವಿಚಾರಣಾಧಿಕಾರಿಗಳು ಪ್ರೇರೇಪಿಸಬೇಕೆಂದು‌ ನಾಡದೇವಿಯ ಮೇಲೆ ಪ್ರತಿಜ್ಞೆ‌ ಸ್ವೀಕಾರ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಡಿಡಿಪಿಐ ಎನ್.ಎಚ್.ನಾಗೂರ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಕಚೇರಿ ಶಿಕ್ಷಣಾಧಿಕಾರಿ ಜಾಹ್ನವಿ ಸಿ., ಡಿವೈಪಿಸಿ ಪ್ರಭಾಕರ ಮಿತ್ಯಾಂತ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ‌ ರಘುನಾಥ ಹಾಗೂ ಕಚೇರಿ ಸಿಬ್ಬಂಧಿಗಳಾದ ಗಿರೀಶ, ಸುಜನಾ, ಸುರೇಶ ಬಾಯೇರಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!