ಮುಸ್ಲಿಂ ಮದುವೆ ಹಿಂದೂ ವಿವಾಹದಂತೆ ಸಂಸ್ಕಾರವಲ್ಲ, ಕೇವಲ ಒಪ್ಪಂದ- ಹೈಕೋರ್ಟ್!

ಬೆಂಗಳೂರು (ಅ.21): ಹಿಂದೂ ವಿವಾಹದ ರೀತಿಯ ಸಂಸ್ಕಾರ ಮುಸ್ಲಿಂ ಮದುವೆಯಲ್ಲಿ ಇಲ್ಲ. ಮುಸ್ಲಿಂ ಮದುವೆ ಒಂದು ಒಪ್ಪಂದ ಮಾತ್ರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

2011ರ ಆಗಸ್ಟ್ 12 ರಂದು ಬೆಂಗಳೂರಿನ ಕೌಂಟುಂಬಿಕ ನ್ಯಾಯಾಲಯದ ಅಡೀಶನಲ್ ಪ್ರಿನ್ಸಿಪಲ್ ಜಡ್ಜ್ ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಎಜಾಜೂರ್ ರೆಹಮಾನ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಈ ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ಹಾಗೂ ಮುಸ್ಲಿಂ ಮದುವೆ ಹಲವು ಅರ್ಥಗಳ ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ. ಹೀಗಾಗಿ ವಿಚ್ಚೇದನ ವೇಳೆ ಉದ್ಭವಿಸವು ಹಕ್ಕುಗಳು ಹಾಗೂ ಬಾಧ್ಯತೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಡೆತಡೆಗಳಿವೆ ಎಂದು ಹೇಳಿದೆ.

1991ರ ನವೆಂಬರ್ 25 ರಂದು ರೆಹಮಾನ್ ಪತ್ನಿ ಸಾಯಿರಾ ಬಾನುಗೆ ತಲಾಖ್ ಮೂಲಕ ವಿಚ್ಚೇದನ ನೀಡಿದ್ದರು. ಮುಸ್ಲಿಂ ಸಂಪ್ರದಾಯದಂತೆ 5,000 ರೂಪಾಯಿ ಮೆಹರ ನೀಡಿ ವಿಚ್ಚೇದನ ಪಡೆದುಕೊಂಡಿದ್ದರು. ಬಳಿಕ ರಹೆಮಾನ್ ಮತ್ತೊಂದು ವಿವಾಹವಾಗಿದ್ದಾರೆ. ವರ್ಷಗಳ ಬಳಿಕ ಮಗುವಿನ ತಂದೆಯಾಗಿದ್ದಾರೆ. ಇತ್ತ ಸಾಯಿರಾ ಬಾನು 2002ರ ಆಗಸ್ಟ್ 24 ರಂದು ನಿರ್ವಹಣೆ ವೆಚ್ಚ ನೀಡಬೇಕು ಎಂದು ಸಿವಿಲ್ ಮೊಕದ್ದಮೆ ಹೊಡಿದ್ದರು. ಸಾಯಿರಾ ಬಾನು ಪ್ರಕರಣ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ ನಿರ್ವಹಣೆಗೆ ಮಾಸಿಕ 3,000 ರೂಪಾಯಿ ನೀಡಬೇಕು ಎಂದು ಸೂಚಿಸಿತ್ತು. ಸಾಯಿರಾ ಬಾನು ಮರು ವಿವಾಹವಾಗುವವರೆಗೆ ಅಥವಾ ಸಾಯಿರಾ ಬಾನು ಮರಣದವರೆಗೆ ಮಾಸಿಕ ನಿರ್ವಹಣೆ ವೆಚ್ಚ ನೀಡಬೇಕು ಎಂದು  ಆದೇಶಿಸಿತ್ತು.

ಈ ಆದೇಶ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಕ್ಷಿತ್, ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ, ವಿಚ್ಚೇದನದಿಂದ ವಿವಾಹದ ಎಲ್ಲಾ ಕಟ್ಟುಪಾಡುಗಳು ಮುರಿದುಬೀಳುತ್ತದೆ. ಮುಸ್ಲಿಮರ ವಿವಾಹವೂ ಒಪ್ಪಂದವಾಗಿದೆ. ಹೀಗಾಗಿ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಸಂಪ್ರದಾಯದಂತೆ ಸಂಸ್ಕಾರಯುತ ಮದುವೆ ಅಲ್ಲದ ಕಾರಣ, ಕೆಲ ನ್ಯಾಯಯುತ ಬಾಧ್ಯತೆಗಿಗೆ ಕಾರಣವಾಗು ತ್ತಿದೆ. ಜೊತೆಗೆ ಹೊಸ ಬಾಧ್ಯತೆಗಳು ಕೂಡ ಉದ್ಭವಿಸವು ಸಾಧ್ಯತೆಗಳಿವೆ. ವಿಚ್ಚೇದನದಿಂದ ನಿರ್ಗತಿಕರಾಗಿರುವ ಮಾಜಿ ಪತ್ನಿಗೆ ಜೀವನಾಂಶ ನೀಡುವುದು ವ್ಯಕ್ತಿಯ ಕರ್ತವ್ಯವಾಗಿದೆ. ಆದರೆ ಮುಸ್ಲಿಂ ತಲಾಖ್ ಇಲ್ಲಿ ಕೆಲ ತೊಡಕುಗಳನ್ನು ಮುಂದಿಡುತ್ತದೆ ಎಂದು ಜಸ್ಚೀಸ್ ದೀಕ್ಷಿತ್ ಹೇಳಿದ್ದಾರೆ.

ಮಾಜಿ ಪತ್ನಿಯ ನಿರ್ವಹಣಾ ಹಕ್ಕು ಇದ್ದಗಿಂತ ವಿಸ್ತರಿಸುವುದಿಲ್ಲ. ಇಸ್ಲಾಮಿಕ್ ನ್ಯಾಯಾಶಾಸ್ತ್ರ ಇದನ್ನು ಹೆಬ್ಬೆರಳಿನ ನಿಮಯ ಎಂದು ಪರಿಗಣಿಸುವುದಿಲ್ಲ. ಮಾಜಿ ಪತ್ನಿಗೆ ಪಾವತಿಸುವ ಮೆಹರ್ ಮೊತ್ತದ ಆಧಾರದ ಮೇಲೆ ಅರ್ಹವಾದ ಮೊತ್ತವಾಗಿರಲಿ ಅಥವಾ ಅಸಮರ್ಪಕ ಮೊತ್ತವಾಗಬಲ್ಲದು ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!