ಮಣಿಪಾಲ: ಅನಧಿಕೃತ ಕೋವಿ ಹೊಂದಿದ್ದ ವ್ಯಕ್ತಿಯ ಬಂಧನ

ಮಣಿಪಾಲ ಅ.20 (ಉಡುಪಿ ಟೈಮ್ಸ್ ವರದಿ): ಅನಧಿಕೃತ ಕೋವಿ ಹೊಂದಿದ್ದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಹಿರೆಬೆಟ್ಟು ಗ್ರಾಮದ ಉಮೇಶ್ ನಾಯಕ್‌‌ ಬಂಧಿತ ಆರೋಪಿ. ಹಿರೇಬೆಟ್ಟುವಿನ ಮುಡಾಯಿಕೋಡಿ ಎಂಬಲ್ಲಿನ ಹಾಡಿಯಲ್ಲಿ ಉಮೇಶ್ ನಾಯಕ್‌‌ ಎಂಬಾತನು ಅನಧಿಕೃತ ಕೋವಿಯನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಪರಿಶೀಲಿಸಿದಾಗ ಆರೋಪಿ ಉಮೇಶ್ ನಾಯಕ್‌‌ ಎಂಬಾತ ಅನಧಿಕೃತ ಕೋವಿಡ್ ಹೊಂದಿರುವುದು ತಿಳಿದು ಬಂದಿದೆ. ಈ ವೇಳೆ ಆರೋಪಿಯನ್ನು ಬಂಧಿಸಿ  ಆತನ ಬಳಿಯಲ್ಲಿದ್ದ ಅನಧಿಕೃತ SBBL ಮಾದರಿಯ1 ಕೋವಿ ಹಾಗೂ 2 ತೋಟೆ (ಮದ್ದುಗುಂಡು)ಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!