ಉಡುಪಿ: 15 ಮಂದಿಯಲ್ಲಿ ಕೋವಿಡ್ ಸೋಂಕು ದೃಢ- 53 ಸಕ್ರಿಯ ಪ್ರಕರಣ
ಉಡುಪಿ ಅ.20(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದು 15 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಪೈಕಿ ಉಡುಪಿಯಲ್ಲಿ 14, ಕುಂದಾಪುರದ ಓರ್ವರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 53 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಇಂದು ಜಿಲ್ಲೆಯಲ್ಲಿ ಯಾರೂ ಕೂಡ ಕೋವಿಡ್ ನಿಂದ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಈ ವರೆಗೆ 2ನೇ ಅಲೆಯಲ್ಲಿ ಒಟ್ಟು 286 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅ.19ರಂದು ಜಿಲ್ಲೆಯಲ್ಲಿ 9 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖ ರಾಗಿದ್ದು, ಕೋವಿಡ್ ಎರಡನೇ ಅಲೆ ಆರಂಭ ಆದಾಗಿನಿಂದ ಈವರೆಗೆ 52,666 ಮಂದಿ ಗುಣಮುಖರಾಗಿದ್ದಾರೆ ಹಾಗೂ ಜಿಲ್ಲೆಯಲ್ಲಿ ಒಟ್ಟು ಈವರೆಗೆ ಪತ್ತೆಯಾದ 76,616 ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ 76,087 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ 2 ನೇ ಅಲೆಯಲ್ಲಿ ಅ.19 ರ ವೇಳೆಗೆ ಜಿಲ್ಲೆಯಲ್ಲಿ 8,24,171 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 53,005 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಸದ್ಯ ಜಿಲ್ಲೆಯಲ್ಲಿ ಒಂದು ಬ್ಲ್ಯಾಕ್ ಫಂಗಸ್ ನ ಪ್ರಕರಣ ಸಕ್ರಿಯವಾಗಿದೆ. ಈ ವರೆಗೆ ಪತ್ತೆಯಾದ 53 ಬ್ಲ್ಯಾಕ್ ಫಂಗಸ್ ನ ಪ್ರಕರಣಗಳಲ್ಲಿ 46 ಮಂದಿ ಗುಣಮುಖರಾಗಿದ್ದು,6 ಮಂದಿ ಮೃತಪಟ್ಟಿದ್ದಾರೆ.