ಭಯೋತ್ಪಾದನೆ ನಮ್ಮ ಕಾಲ ಬುಡಕ್ಕೆ ಬರುತ್ತಿದೆ, ಹಿಂದೂ ಸಮಾಜವನ್ನು ರಕ್ಷಿಸುವ ಕೆಲಸವಾಗಬೇಕಿದೆ- ಸುನಿಲ್ ಕೆ ಆರ್

ಉಡುಪಿ ಅ.20(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಬಜರಂಗದಳದ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯ ಹಾಗೂ ಹಿಂದು ಮನೆಗಳನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಬಜರಂಗದಳದ ರಾಜ್ಯ ಸಂಚಾಲಯ ಸುನಿಲ್ ಕೆ ಆರ್ ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಡೆಸುತ್ತಿರುವ ಈ ಪ್ರತಿಭಟನೆಗೆ ಇಸ್ಲಾಂ ಮುಕ್ರಿಗಳು ಕೈ ಜೋಡಿಸಬೇಕು. ಇಲ್ಲವಾದಲ್ಲಿ ಬೇರೆ ಬೇರೆ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮಠ ಮಂದಿರಗಳನ್ನು ಧ್ವಂಸ ಮಾಡಿದಂತೆ ಭಾರತದಲ್ಲಿರುವ ಅಲ್ಪಸಂಖ್ಯಾತರನ್ನು ಅವರ ಬಹು ಸಂಖ್ಯಾತ ರಾಷ್ಟ್ರಗಳಾದ ಬಾಂಗ್ಲಾದೇಶ , ಪಾಕಿಸ್ಥಾನಕ್ಕೆ ಓಡಿಸುವಂತಹ ಕೆಲಸವನ್ನು ವಿಶ್ವಹಿಂದು ಪರಿಷತ್ ಹಾಗೂ ಬಜರಂಗ ದಳ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

1943 ರಿಂದ ನಿರಂತರವಾಗಿ ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದೆ. ಬಾಂಗ್ಲಾದಲ್ಲಿ 38 ಶೇ. ದಷ್ಟಿದ್ದ ಹಿಂದೂ ಸಮಾಜ ಇಂದು ಶೇ. 3 ಕ್ಕೆ ಇಳಿಕೆಯಾಗಿದೆ. ಎಲ್ಲಿ ಹಿಂದುಗಳು ಅಲ್ಪ ಸಂಖ್ಯಾತರಾಗಿ ಬದುಕುತ್ತಾರೋ ಅಲ್ಲಿ ಹಿಂದುಗಳ ಮೇಲೆ ದಾಳಿ ನಡೆಯುತ್ತದೆ ಹಾಗೂ ಹಿಂದೂಗಳ ಮಠ ಮಂದಿರಗಳನ್ನು ದ್ವಂಸ ಮಾಡಿ ಇಲ್ಲಿ ಹಿಂದೂ ಸಮಾಜ ಇರಲೇ ಇಲ್ಲ ಎನ್ನುವಂತೆ ಸಮಾಜಕ್ಕೆ ಬಿಂಬಿಸುವಂತ ಕೆಲಸ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಇಸ್ಲಾಂ ಎನ್ನುವುದು ಭಾರೀ ದೊಡ್ಡ ಭಯೋತ್ಪಾದನೆಯ ಮೂಲ ಕೇಂದ್ರವಾಗಿ ನಿರ್ಮಾಣಗೊಳ್ಳುವ ವ್ಯವಸ್ಥೆ ಇಡೀ ಪ್ರಪಂಚದಲ್ಲಿ ನಡೆಯುತ್ತಿದೆ. ಇಸ್ಲಾಂ ಇರುವ ಕಡೆ ಆತಂಕ, ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದೆ. ಹೀಗಿರುವಾಗ ನಾವು ಹಿಂದುಗಳು ಯಾವಾಗ ಅಲ್ಪಸಂಖ್ಯಾತರಾಗುತ್ತೆವೋ ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ಭಯೋತ್ಪಾದನೆ ನಮ್ಮ ಕಾಲ ಬುಡಕ್ಕೆ ಬರುತ್ತಿದೆ. ಅದರಿಂದ ಹಿಂದೂ ಸಮಾಜವನ್ನು ರಕ್ಷಿಸುವಂತಹ ಕೆಲಸ ನಮ್ಮ ಸಂಘಟನೆಗಳಿಂದ ನಿರಂತರವಾಗಿ ಆಗಬೇಕು ಎಂದ ಅವರು, ಸ್ವಾಭಿಮಾನಿ ಹಿಂದೂ ಸಮಾಜ ನಿರ್ಮಾಣ ಮಾಡಬೇಕು, ಸಂಘಟನೆಗಳು ಹಿಂದೂ ಸಮಾಜವನ್ನು ಸಂಘಟಿತ ಸಮಾಜ ಜಾಗೃತ ಸಮಾಜ ಮಾಡುತ್ತಾ ಬಂದಿದೆ. ಹಿಂದುಗಳು ಅಲ್ಪ ಸಂಖ್ಯಾತರಾಗದೆ, ಹಿಂದುಗಳಿಗಾಗಿ ಇರುವ ಒಂದು ದೇಶವನ್ನು ಉಳಿಸುವ ಪ್ರಯುತ್ನ ಮಾಡಬೇಕು ಎಂದು ಕರೆ ನೀಡಿದರು

ಈ ವೇಳೆ ಪೊಲೀಸರು ಕೇಸರಿ ವಸ್ತ್ರ ಧರಿಸಿದ್ದರ ಕುರಿತಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ ಅವರು, ನಾವು ಕೇಸರಿ ಬಣ್ಣ ಉಟ್ಟಿದ್ದು ತ್ಯಾಗ ಮನೋ ಭಾವನೆಯಿಂದವೇ ಹೊರತು ಯಾವುದೇ ಕೋಮು ಭಾವನೆಯಿಂದಲ್ಲ. ಕೇಸರಿ ಕೇವಲ ಬಜರಂಗ ದಳ ಅಥವಾ ವಿಶ್ವ ಹಿಂದೂ ಪರಿಷದ್‍ಗೆ ಸೀಮಿತವಲ್ಲ ಅದು ಇಡೀ ದೇಶದ ಸಂಕೇತ. ಇಡೀ ದೇಶಕ್ಕೆ ಇಸ್ಲಾಂ ಮತ್ತು ಕ್ರೈಸ್ತರು ದಾಳಿ ಮಾಡಿದಾಗ ಇಡೀ ದೇಶದ ಸಂಸ್ಕøತಿ ಉಳಿಸಿರುವುದು ಇದೇ ಕೇಸರಿಯಿಂದ. ನಾವು ದೇಶದ ಸಂಸ್ಕøತಿ ಹಾಗೂ ಹಿಂದುತ್ವವನ್ನು ಉಳಿಸಿಕೊಂಡಿದ್ದೇವೆ. ಇದೇ ಕೇಸರಿ ಬಗ್ಗೆ ಹಿಂದೂ ಸಮಾಜದಿಂದ ಆರಿಸಿದ ಜನಪ್ರತಿನಿಧಿ ಆಕ್ಷೇಪಾರ್ಹವಾಗಿ ಮಾತನಾಡುತ್ತೀರಾದರೆ ಮೊದಲು ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳಿ. ಇಂದು ನಿಮ್ಮ ಕುಟುಂಬ ಉಳಿದಿರುವುದೇ ಈ ಕೇಸರಿಯಿಂದಲೇ ಎಂದು ಖಡಕ್ ಆಗಿ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಂದರ್ಭ ಪ್ರತಿಭಟನೆಯಲ್ಲಿ ಹಿಂದು ಪರ ಸಂಘಟನೆಯ ದಿನೇಶ್ ಮೆಂಡನ್, ಅಶೋಕ್ ಪಾಲ್ಕನ್, ಮನೋಜ್, ಸುಧಾಕರ್ ಆಚಾರ್ಯ ಮೊದಲಾದವರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!