ಶಿರ್ವ ಲಾರಿ ಚಾಲಕನಿಗೆ ಹಲ್ಲೆ- ಕಠಿಣ ಕ್ರಮಕ್ಕೆ ಆಗ್ರಹ

ಶಿರ್ವ ಅ.16(ಉಡುಪಿ ಟೈಮ್ಸ್ ವರದಿ): ಲಾರಿ ಹೂತು ಹೋದ ಕಾರಣ ಮರಳು ಅನ್ಲೋಡ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಚಾಲಕನಿಗೆ ನಿಂದಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೂಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಲಾರಿ ಟೆಂಪೊ ಮಾಲಕರ ಸಂಘಟನೆಗಳ ಬ್ರಹ್ಮಾವರ, ಉಡುಪಿ, ಕಟಪಾಡಿಯ ಅಧ್ಯಕ್ಷರುಗಳು ಹಾಗೂ ಸದಸ್ಯರನ್ನು ಒಳಗೊಂಡು ಒಕ್ಕೂಟದ ವತಿಯಿಂದ ಶಿರ್ವ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ವೇಳೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಬಗ್ಗೆ ಸಲ್ಲಿಸಿದ ಮನವಿಯಲ್ಲಿ, ಅ.14 ರಂದು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮುದರಂಗಡಿಯ ಕೆಂಜ ಎಂಬಲ್ಲಿ ಮರಳನ್ನು ಖಾಲಿ ಮಾಡಲು ಸೈಟಿನೊಳಗೆ ಪ್ರವೇಶಿಸಿದ ಸಂದರ್ಭ ಮರಳು ಲಾರಿ ಹೂತು ಹೋದ ಕಾರಣ ಅಲ್ಲೇ ಇದ್ದ ಸೈಟ್ ಕಾಂಟ್ರಾಕ್ಟರ್ ಹಾಗೂ ಇನ್ನಿತರರು ಸೇರಿಕೊಂಡು ನಿಗದಿತ ಸ್ಥಳಕ್ಕೆ ಮರಳು ಅನ್ಲೋಡ್ ಮಾಡಲಿಲ್ಲ ಎಂಬ ಕಾರಣಕ್ಕೆ ಮೋಹನ್ ದಾಸ್ ಕೋಟ್ಯಾನ್ ರವರಿಗೆ ಹಲ್ಲೆ ನಡೆಸಿರುವ ವಿಚಾರವಾಗಿ ಈಗಾಗಲೇ ಶಿರ್ವ ಪೊಲೀಸ್ ಠಾಣಾ ಅಧಿಕಾರಿಗಳು ದೂರನ್ನು ದಾಖಲಿಸಿ ಕೊಂಡಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ಮಾಡಿದವರನ್ನು ಕೂಡಲೇ ತಮ್ಮ ವಶಕ್ಕೆ ಪಡೆದುಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿ ಉತ್ತಮ ರೀತಿಯಲ್ಲಿ ಸ್ಪಂದಿಸಿರುವುದು ಸ್ವಾಗತಾರ್ಹ. ತಪ್ಪಿತಸ್ಯರನ್ನು ಇನ್ನೂ ಹೆಚ್ಚಿನ ಶಿಕ್ಷೆಗೊಳಪಡಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!