ಸುರತ್ಕಲ್: ಬಂಟರ ಸಂಘದ ಅಧ್ಯಕ್ಷರಾಗಿ ಸುಧಾಕರ ಎಸ್. ಪೂಂಜ ಪುನರಾಯ್ಕೆ

ಸುರತ್ಕಲ್: ಬಂಟರ ಸಂಘ ಸುರತ್ಕಲ್ ಇದರ  2021-2023 ಸಾಲಿನ ನೂತನ ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ ಹೊಸಬೆಟ್ಟು ಆಯ್ಕೆಗೊಂಡಿದ್ದಾರೆ. ಬಂಟರ ಭವನದಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಸುಧಾಕರ ಎಸ್ ಪೂಂಜಾ ಹೊಸಬೆಟ್ಟು ಪುನರಾಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಸುರತ್ಕಲ್, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಸುರತ್ಕಲ್, ಜತೆಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಂಘಟನಾ ಕಾರ್ಯದರ್ಶಿ ದೇವೇಂದ್ರ ಕೆ ಶೆಟ್ಟಿ ಇಡ್ಯಾ, ಸಾಂಸ್ಕೃತಿಕ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಕ್ರೀಡಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಾಟಿಪಳ್ಳ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪುಷ್ಪರಾಜ್ ಶೆಟ್ಟಿ ಮಧ್ಯ, ಪ್ರತಾಪ್ ಶೆಟ್ಟಿ ಚೇಳೈರು, ಕುಸುಮಾಕರ ಶೆಟ್ಟಿ ಕುತ್ತೆತ್ತೂರು, ಸುಜೀರ್ ಶೆಟ್ಟಿ ಸೂರಿಂಜೆ, ರತ್ನಶೇಖರ ಶೆಟ್ಟಿ ತೋಕೂರು, ಕಿರಣ್ ಪ್ರಸಾದ್ ರೈ ಕುಳಾಯಿ, ಶಿಶಿರ್ ಶೆಟ್ಟಿ ಪೆರ್ಮುದೆ, ಅಂಜನಾ ಎಂ ಶೆಟ್ಟಿ ಇಡ್ಯಾ, ಮಾಲತಿ ಜೆ ಶೆಟ್ಟಿ ಸುರತ್ಕಲ್, ಸುಜಾತ ಶೆಟ್ಟಿ ಕೃಷ್ಣಾಪುರ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಬಿ.ಎ.ಶೆಟ್ಟಿ ಹೊಸಬೆಟ್ಟು ಮತ್ತು  ಉಲ್ಲಾಸ್‌ ಅರ್.ಶೆಟ್ಟಿ ಪೆರ್ಮುದೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ದೇವಾನಂದ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!