ಬಡ ಮಕ್ಕಳ ಆರೋಗ್ಯ ಸೇವೆಯಲ್ಲಿ ದೇವರ ಕಾಣುವ ರವಿ ಕಟಪಾಡಿ- ಕೇಮಾರುಶ್ರೀ

ಕಟಪಾಡಿ (ಉಡುಪಿ ಟೈಮ್ಸ್ ವರದಿ): ಪ್ರತೀ ವರ್ಷ ಅಷ್ಟಮಿಯಂದು ವಿಭಿನ್ನ ವೇಷ ಧರಿಸಿ ಮನರಂಜನೆ ಜೊತೆಗೆ ಅಸಹಾಯಕ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ರವಿ ಕಟಪಾಡಿ ಅವರು ಈ ಭಾರಿ ವೇಷ ಧರಿಸಿ ಸಂಗ್ರಹಿಸಿದ ಮೊತ್ತವನ್ನು 8 ಬಡ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ.

ನಿನ್ನೆ ಕಟಪಾಡಿ ಪೇಟೆಬೆಟ್ಟು ಶ್ರೀಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡವು ಈ ಬಾರಿ  ಡಾರ್ಕ್ ವನ್ ಎಲೈಟ್ ವೇಷಧಾರಿಯಾಗಿ ಸಂಗ್ರಹಿಸಿದ 7,22,350 ರೂ.ವನ್ನು 8 ಮಕ್ಕಳ ಚಿಕಿತ್ಸೆಗೆ ಹಸ್ತಾಂತರಿಸಿದರು.

ಈ ವೇಳೆ ಕೇಮಾರು ಶ್ರೀ ಈಶ ವಿಠ್ಠಲ ಸ್ವಾಮೀಜಿ ಆಶಿರ್ವಚನ ನೀಡಿ ಬಡವರ ಮಕ್ಕಳ ಆರೋಗ್ಯ ಸೇವೆಯಲ್ಲಿ ದೇವರ ಕಾಣುವ ರವಿ ಕಟಪಾಡಿಯ ಜೀವನ ಮೌಲ್ಯ, ಮಾನವೀಯ ಸೇವೆಯು ಹೃದಯ ಶ್ರೀಮಂತಿಕೆಯುಕ್ತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಣಿಪಾಲ ಡಿಜಿಟಲ್ ನೆಟ್ ವರ್ಕ್ ಲಿ.ನ ಮುಖ್ಯಸ್ಥ ಹರೀಶ್ ಭಟ್ ಮಾತನಾಡಿ, ರವಿ ಕಟಪಾಡಿ ಅವರು ಎಳೆಯ ಮಕ್ಕಳ ಆರೋಗ್ಯ ಸೇವೆಯ ಮೂಲಕ ಸಮಾಜದ ಸಂಕಷ್ಟಕ್ಕೆ ನೀಡುವ ಮಾನವೀಯತೆ ಸೇವೆಯು ಶ್ರೇಷ್ಠ ಸತ್ಕಾರ್ಯವಾಗಿದೆ. ಇದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ  ಬಲು ದೊಡ್ಡ ಕೊಡುಗೆಯಾಗಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ರವಿ ಕಟಪಾಡಿ ಮತ್ತು ಅವರ ತಾಯಿಯನ್ನು ಸಮ್ಮಾನಿಸಲಾಯಿತು.

ಈ ಸಂದರ್ಭ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಶ್ರೀಕ್ಷೇತ್ರ ಪೇಟೆಬೆಟ್ಟುವಿನ ಗುರಿಕಾರ ಹರಿಶ್ಚಂದ್ರ ಪಿಲಾರು, ರವಿ ಫ್ರೆಂಡ್ಸ್ ತಂಡದ ಮಾರ್ಗದರ್ಶಕ ಕೆ.ಮಹೇಶ್ ಶೆಣೈ, ಡಾ.ಎ.ರವೀಂದ್ರನಾಥ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರವಿ ಕಟಪಾಡಿಯವರು ನಡೆಸುತ್ತಿರುವ ಅಶಕ್ತರ ಸೇವೆಯನ್ನು ಶ್ಲಾಘಿಸಿದರು. 

Leave a Reply

Your email address will not be published. Required fields are marked *

error: Content is protected !!