ಉಡುಪಿ: ಪ್ರಖ್ಯಾತ ಆ್ಯಕ್ಟಿವ್ ಪಿಕ್ಸೆಲ್’ನಿಂದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಸಿಟಿವಿ ಲಭ್ಯ

ಉಡುಪಿ ಜು.27(ಉಡುಪಿ ಟೈಮ್ಸ್ ವರದಿ): ಸಂಪೂರ್ಣ ಸುರಕ್ಷತೆಯ ದೃಷ್ಟಿಯಿಂದ ಸಿಸಿ ಟಿವಿಯನ್ನು ಅಳವಡಿಸುವವರು ಗುಣಮಟ್ಟದ ವಿಡಿಯೋದ ಬಗ್ಗೆ ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ.

ಯಾಕೆಂದರೆ ಸಿಸಿ ಟಿವಿ ಸೇವೆ ಒದಗಿಸುವಲ್ಲಿ ಕಳೆದ 15 ವರ್ಷಗಳ ಅನುಭವ ಹೊಂದಿರುವ ಪ್ರಖ್ಯಾತ ಆ್ಯಕ್ಟಿವ್ ಪಿಕ್ಸೆಲ್ ಗ್ರಾಹಕರಿಗೆ ನೀಡುತ್ತಿದೆ ಅತ್ಯುತ್ತಮ ಗುಣ ಮಟ್ಟದ ವಿಡಿಯೋ ಕ್ವಾಲಿಟಿ ಸೌಲಭ್ಯದ ಸಿಸಿ ಟಿವಿಗಳು.

ಉಡುಪಿಯಲ್ಲಿರುವ ಆ್ಯಕ್ಟಿವ್ ಪಿಕ್ಸೆಲ್ ನ ಶೋರೂಂ ನಲ್ಲಿ ಮನೆ, ಟ್ರಾಫಿಕ್ ಮತ್ತು ಕಚೇರಿಗಳಿಗೆ ಅಳವಡಿಸಬಹುದಾದ ಅತ್ಯುನ್ನತ ದರ್ಜೆಯ ಎಲ್ಲಾ ಬಗೆಯ ಸಿಸಿ ಟಿವಿಗಳೂ ಲಭ್ಯವಿದೆ. 

100 ರಿಂದ 200 ಮೀ. ವ್ಯಾಪ್ತಿಯ ದೃಶ್ಯವನ್ನು ಸೆರೆ ಹಿಡಿಯಬಹುದಾದ ಸಾಮರ್ಥ್ಯದ ಸಿಸಿ ಟಿವಿಗಳು ಲಭ್ಯವಿದ್ದು, ವಿವಿಧ ಬಗೆಯ ಅತ್ಯಾಕರ್ಷಕ ಬೆಲೆಗಳಲ್ಲಿ ಸಿಸಿಟಿವಿಗಳು ಆ್ಯಕ್ಟಿವ್ ಪಿಕ್ಸೆಲ್ ನಲ್ಲಿ ಸಿಗಲಿದೆ.

ಒಂದು ವರ್ಷದ ಅವಧಿಯೊಳಗೆ ಗ್ರಾಹಕರು ಖರೀದಿಸಿದ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡಿಂಗ್, ಪಿಚ್ಚರ್ ಕ್ವಾಲಿಟಿ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ, ಉಚಿತವಾಗಿ ಸರಿಪಡಿಸಿ ಕೊಡಲಾಗುವುದು. ಅಲ್ಲದೆ ಸೋಲಾರ್ ಶಕ್ತಿಯ ಮೂಲಕ ಕಾರ್ಯ ನಿರ್ವಹಿಸುವಂತಹ ಸಿಸಿಟಿವಿಗಳೂ ಆ್ಯಕ್ಟಿವ್ ಪಿಕ್ಸೆಲ್ ನಲ್ಲಿ ಲಭ್ಯವಿದೆ.

ಇನ್ನು ಆ್ಯಕ್ಟಿವ್ ಪಿಕ್ಸೆಲ್ ಅವರ ಸಿಸಿಟಿವಿಯಲ್ಲಿ ಕಡಿಮೆ ಬೆಳಕಿನಲ್ಲಿ ಅಥವಾ ಕತ್ತಲೆಯಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ರೆಕಾರ್ಡ್ ಆಗಬಹುದಾದ ವಿಶೇಷ ಗುಣಗಳು ಇದ್ದು, ರೆಕಾರ್ಡ್ ಆಗುವ ವಿಡಿಯೋಗಳನ್ನು ವೈಫೈ ಮೂಲಕ ನೇರವಾಗಿ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸಬಹುದಾಗಿದೆ. ಸಿಸಿಟಿವಿ ಬ್ಯಾಟರಿ ಆಫ್ ಆಗುವ ಬಗ್ಗೆ ಗ್ರಾಹಕರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಆ್ಯಕ್ಟಿವ್ ಪಿಕ್ಸೆಲ್ ನ ಸಿಸಿಟಿವಿಯಲ್ಲಿ ಚಾರ್ಜ್ ಆಗುತ್ತಿರುವಾಗಲೂ ವಿಡಿಯೋ ರೆಕಾರ್ಡ್ ಆಗುತ್ತಿರುತ್ತದೆ. ಮಾತ್ರವಲ್ಲದೆ 360 ಡಿಗ್ರಿ ವ್ಯಾಪ್ತಿಯಲ್ಲಿ ವಿಡಿಯೋ ರೆಕಾರ್ಡ್ ಆಗುವ ಸಾಮರ್ಥ್ಯದ ಸಿಸಿಟಿವಿಗಳೂ ಇಲ್ಲಿ ಲಭ್ಯವಿದೆ. 


ಹಾಗಾಗಿ ಇನ್ನು ಮುಂದೆ ಸಿಸಿಟಿವಿ ಅಳವಡಿಸುವವರು ಆ್ಯಕ್ಟಿವ್ ಪಿಕ್ಸೆಲ್’ಗೆ ಭೇಟಿ ನೀಡಿ ಅತ್ಯುನ್ನತ ಗುಣಮಟ್ಟದ ಸಿಸಿಟಿವಿ ಅಳವಡಿಸಿ ನಿಶ್ಚಿಂತರಾಗಿರಿ. ಈ ಉತ್ತಮ ಗುಣಮಟ್ಟದ ಆ್ಯಕ್ಟಿವ್ ಪಿಕ್ಸೆಲ್ ನ ಸಿಸಿ  ಟಿವಿಗಳನ್ನು ನಿಮ್ಮ ಮನೆ, ಕಚೇರಿ, ಹೋಟೆಲ್ ಹಾಗೂ ಇನ್ನಿತರ ಕಡೆಗಳಲ್ಲಿ ಅಳವಡಿಸಲು ಸಂಪರ್ಕಿಸಿ ಮತ್ತು ಅದ್ಭುತ ಗುಣಲಕ್ಷಣಗಳಿರುವ ಸಿಸಿಟಿವಿಯನ್ನುನಿಮ್ಮದಾಗಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಮತ್ತು ಸಿಸಿಟಿವಿಯನ್ನು ಅಳವಡಿಸಲು ಸಂಪರ್ಕಿಸಿ: 8317431918 / 7022624741

Leave a Reply

Your email address will not be published. Required fields are marked *

error: Content is protected !!