ಬ್ರಹ್ಮಾವರ: ಚರ್ಚ್‌’ನಲ್ಲಿ ಕಳ್ಳತನ

ಬ್ರಹ್ಮಾವರ ಜು.24(ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ ಚಾಂತಾರು ಗ್ರಾಮದಲ್ಲಿರುವ ಹೋಲಿ ಫ್ಯಾಮಿಲಿ ಚರ್ಚ್‌ ನಲ್ಲಿ  ಕಳ್ಳತನ ನಡೆದಿರುವ ಘಟನೆ ನಿನ್ನೆ ನಡೆದಿದೆ.

ಈ ಬಗ್ಗೆ  ಚಾಂತಾರಿನ ಹೋಲಿ ಫ್ಯಾಮಿಲಿ ಚರ್ಚ್‌ ಹಾಗೂ ನಿರ್ಮಲಾ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾಗಿರುವ  ರೆ. ಫಾ. ವಿಕ್ಟರ್ ಫೆರ್ನಾಂಡೀಸ್ ಅವರು ದೂರು ನೀಡಿದ್ದು, ಅದರಂತೆ,ಇವರು, ನಿನ್ನೆ ರಾತ್ರಿ ಚರ್ಚ್‌‌ ಮತ್ತು ನಿರ್ಮಲ ಶಾಲೆಯ ಆಫೀಸುಗಳಿಗೆ ಬೀಗ ಹಾಕಿ ತಮ್ಮ ವಸತಿ ಗೃಹಕ್ಕೆ ಹೋಗಿದ್ದರು. ಆದರೆ ಮರುದಿನ  ಬೆಳಿಗ್ಗೆ ನೋಡುವಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ.

ನಿನ್ನೆ ರಾತ್ರಿ ಚರ್ಚ್‌ ನ ಆಫೀಸು ಕೋಣೆಯ ಎದುರಿನ ಕಿಟಕಿಯ ಗಾಜನ್ನು ಒಡೆದು, ಕಬ್ಬಿಣದ ಪಟ್ಟಿಯನ್ನು ಕತ್ತರಿಸಿ, ಒಳ ನುಗ್ಗಿದ ಕಳ್ಳರು ಡ್ರಾವರಿನಲ್ಲಿದ್ದ 88,000 ರೂ ಕಳವು ಮಾಡಿದ್ದಾರೆ. ಹಾಗೂ ನಿರ್ಮಲ ಶಾಲೆಯ ಆಫೀಸು ಕೋಣೆಯ ಬಾಗಿಲು ಬೀಗವನ್ನು ಒಡೆದು ಒಳ ಹೊಕ್ಕ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದಿದ್ದಾಗ ಪರಾರಿಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!