ಕೋಟ: ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ಮಹಿಳೆಯ ಸಾವು

ಕೋಟ ಜು.24(ಉಡುಪಿ ಟೈಮ್ಸ್ ವರದಿ):ವಿಷ ಪೂರಿತ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

ಬಾಬಿ (58) ಮೃತಪಟ್ಟವರು. ಇವರು ನಿನ್ನೆ, ಮನೆಯಲ್ಲಿ ಅಡುಗೆ ಒಲೆಗೆ ಸೌದೆ ತರಲು ಕೊಟ್ಟಿಗೆಗೆ ಹೋಗಿ ಸೌದೆ ರಾಶಿಯಿಂದ ಕಟ್ಟಿಗೆಯನ್ನು ತೆಗೆಯುವಾಗ ಯಾವುದೋ ವಿಷ ಪೂರಿತ ಹಾವು ಅವರ ಕೈಗೆ ಕಚ್ಚಿತ್ತು.

ತಕ್ಷಣ ಅವರನ್ನು ಕೋಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಅವರು ಇಂದು ಬೆಳಿಗ್ಗೆ  ಚಿಕಿತ್ಸೆ ಫಲಕಾರಿಯಾಗದೇ ಮೃತ ಮೃತಪಟ್ಟಿದ್ದಾರೆ. ಈ ಬಗ್ಗೆ  ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!